ಬಂಟ್ವಾಳ:ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಎಸ್ ಪಿ ವೈ ಎಸ್ ಎಸ್ ಇದರ ಕೆಲೆಂಜ ಶಾಖೆಯಾದ ಶ್ರೀನಿಕೇತನ ತಂಡದಿಂದ ವಿದ್ಯಾರ್ಥಿಗಳಿಗೆ ಸರಳ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸದ ಬಗ್ಗೆ ರಾಮಣ್ಣ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಬಾಬಕಿರಣ್, ಕುಸುಮ, ಮತ್ತು ಗೀತಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಂದ ಪ್ರಾಣಾಯಾಮ ಮತ್ತು ಸರಳಯೋಗಾಸನಗಳನ್ನು ಮಾಡಿಸಿದರು.
ದೈಹಿಕ ಶಿಕ್ಷಕ ಇಂದು ಶೇಖರ್ ಅವರು ಸ್ವಾಗತಿಸಿದರು, ಶಿಕ್ಷಕಿ ಸಂಗೀತ ಶಮ೯ರವರು ವಂದಿಸಿದರು.
