ಸುದ್ದಿ9 ಮೂಡುಬಿದರೆ: ಅವಿಭಜಿತ ದ.ಕ ಜಿಲ್ಲೆಯ ಸವಿತಾ ಸಮಾಜದ ಸಂಘಟನೆ ಸ್ಥಾಪಕರಾದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಮಂಗಳವಾರ ಮೂಡುಬಿದರೆ ಸಮಾಜಮಂದಿರದಲ್ಲಿ ನಡೆಯಿತು.
ದ.ಕ ಜಿಲ್ಲಾ ಸವಿತಾ ಸಮಾಜದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಮೇಜರ್ ಲೋಹಿತ್ ಸುವರ್ಣ, ಪತ್ರಿಕಾ ಛಾಯಾಗ್ರಾಹಕ ಸುಧಾಕರ ಎಮರ್ಾಳ್ ಅವರಿಗೆ ವಿಠಲ ಭಂಡಾರಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜ್ಯೋತಿಷಿ ಅನಂತರಾಮ ಬಂಗಾಡಿ ಅವರು ಬರೆದ `ಭಂಡಾರಿ ಸಮಾಜ-ಒಂದು ಕಿರು ಅಧ್ಯಯನ’ ಪುಸ್ತಕವನ್ನು ಮೂಡುಬಿದರೆ ಭಂಡಾರಿ ಸೇವಾ ಸಂಘದ ಅಧ್ಯಕ್ಷ ಮಾಧವ ಭಂಡಾರಿ ಕಾನ ಬಿಡುಗಡೆಗೊಳಿಸಿದರು.
ದ.ಕ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದಿನೇಶ್.ಎಲ್.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಬಿ.ಸಿ.ರೋಡ್ ಸವಿತಾ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸಂಸ್ಮರಣಾ ಭಾಷಣ ಮಾಡಿದರು. ವಿಠಲ ಭಂಡಾರಿಯವರು ಸವಿತಾ ಸಮಾಜವನ್ನು ಒಂದುಗೂಡಿಸುವ ಮಹಾನ್ ಕಾಯಕ ಮಾಡಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಸವಿತಾ ಸಮಾಜದವರಲ್ಲಿ ಶಕ್ತಿ ತುಂಬುವ ಕೆಲಸವೂ ವಿಠಲ ಭಂಡಾರಿಯವರಿಂದಾಗಿದೆ.ಸಮಾಜವು ಶೈಕ್ಷಣಿಕವಾಗಿ ಮುಂದುವರಿಯಬೇಕೆನ್ನುವ ಹೆಬ್ಬಯಕೆ ಹೊಂದಿದ ಅವರು ಸ್ವತಃ ಶಿಕ್ಷಕರಾಗಿ ಶಿಕ್ಷಣ ಪಂಡಿತನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಮಾಜವನ್ನು ಕ್ರೀಡಾ ಚಟುವಟಿಕೆ, ಪತ್ರಿಕೆ ಸ್ಥಾಪಿಸುವ ಮೂಲಕ ಕಿರಿಯಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಿದ್ದಾರೆ.
ಕಂಪ್ಯೂಟರ್ ಡಾಟ ಕಂಪ್ಯೂಟರ್ ತರಬೇತುದಾರೆ ಆಶಾಲತಾ ಬಿ.ಸಿ.ರೋಡು ಗುಣಮಟ್ಟದ ಶಿಕ್ಷಣ ಮತ್ತು ಪೋಷಕರು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ದಿ.ವಿಠಲ ಭಂಡಾರಿ ಅವರ ಪತ್ನಿ ಭವಾನಿ, ಮೂಡುಬಿದರೆ ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಭಂಡಾರಿ, ದ.ಕ. ಜಿಲ್ಲಾ ಸವಿತಾ ಸಮಾಜ ಉಪಾಧ್ಯಕ್ಷ ಆನಂದ ಭಂಡಾರಿ, ಕೋಶಾಧಿಕಾರಿ ಕೇಶವ ಭಂಡಾರಿ, ರಾಜ್ಯ ಪ್ರತಿನಿಧಿ ರವೀಂದ್ರ ಭಂಡಾರಿ, ಪುತ್ತೂರು ಸಂಘದ ಅಧ್ಯಕ್ಷ ಸುರೇಂದ್ರ ಭಂಡಾರಿ, ಬೆಳ್ತಂಗಡಿ ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ, ಮೂಡುಬಿದರೆ ಸಂಘದ ಅಧ್ಯಕ್ಷ ಪ್ರಕಾಶ್ ಭಂಡಾರಿ ಕಾನ, ಸುಳ್ಯ ಸಂಘದ ಅಧ್ಯಕ್ಷ ದಿನೇಶ್ ಗುತ್ತಿಗಾರ್ ಉಪಸ್ಥಿತರಿದ್ದರು.
ಮೂಡುಬಿದರೆ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದಶರ್ಿ ಸಂತೋಷ್ ಕುಮಾರ್, ವಸಂತ ಬೆಳ್ಳೂರು ಸನ್ಮಾನಿತರ ಪರಿಚಯ ಮಾಡಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಎನ್.ಪ್ರಕಾಶ್ ಭಂಡಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಹರೀಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
