`ಸಂಘ ಸಂಸ್ಥೆಗಳು ವಿಕಲಚೇತನರಿಗೆ ಶಕ್ತಿ ತುಂಬಲಿ’


ಮೂಡುಬಿದರೆ:
ಸಂಘ ಸಂಸ್ಥೆಗಳು ವ್ಯಾಪಾರೀಕರಣ ಮನೋಧರ್ಮದಿಂದ ದೂರವಿದ್ದು, ಸಮಾಜದಲ್ಲಿ ಅಸಕ್ತರ ಏಳಿಗೆ ಮಾಡುವಲ್ಲಿ ಮುಂದಾಗಬೇಕು. ವಿಕಲಚೇತನ ಶಕ್ತಿ, ಸಾಮಥ್ರ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸಿದ್ದಲ್ಲಿ ವಿಕಲಚೇತನರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ, ಆದರ್ಶ ಸಂಸ್ಥೆ ಸದಸ್ಯ ಹಸ್ದುಲ್ಲಾ ಇಸ್ಮಾಯಿಲ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಅಂಗವಾಗಿ, ಆದರ್ಶ ಸಂಸ್ಥೆ ಹಾಗೂ ವಿಶೇಷ ಮಕ್ಕಳ ಪೋಷಕರ ವೇದಿಕೆ ಜಂಟಿ ಆಶ್ರಯದಲ್ಲಿ ಬುಧವಾರ ಸಮಾಜಮಂದಿರದಲ್ಲಿ ನಡೆದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಾಗೂ ಪೋಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

_MG_1025

_MG_1030
ಅವಿಭಜಿತ ದ.ಕ ಜಿಲ್ಲೆ ವಿಕಲಚೇತನರ ಸಂಘದ ಅಧ್ಯಕ್ಷ ಡಾ.ಮುರಳೀಧರ ನಾಕ್ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದರೆ ವಿಕಲಚೇತನರು ಹಾಗೂ ಪಾಲಕರ ಒಕ್ಕೂಟದ ಗೌರವಾಧ್ಯಕ್ಷ ಫೆಲಿಕ್ಸ್ ಲೋಬೋ, ಅಧ್ಯಕ್ಷ ಅಬ್ದುಲ್ ಖಾದರ್, ಒಕ್ಕೂಟದ ಸಲಹೆಗಾರ ಯಾದವ ಶೆಟ್ಟಿ, ಅಂಧೇರಿ ಹಿಲ್ಪೆ ಮಂಗಳೂರು ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಇಮ್ಯಾನುವೆಲ್ ಮೋನಿಸ್, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಸಮಾಜ ಕಾರ್ಯ ಕಾಲೇಜಿನ ಉಪನ್ಯಾಸಕಿ ಶೆರ್ಲಿ .ಟಿ.ಬಾಬು ಮೊದಲಾದವರು ಉಪಸ್ಥಿತರಿದ್ದರು.
ಮೂಡುಬಿದರೆಯ ಉಪತಹಸೀಲ್ದಾರ್ ಅಬ್ದುಲ್ ರೆಹಮಾನ್ ಅವರಿಗೆ ವಿಕಲಚೇತನರ ಬೇಡಿಕೆಯ ಹಕ್ಕೋತ್ತಾಯದ ಮನವಿ ಸಲ್ಲಿಸಿದರು. ವಿಕಲಚೇತನ ಮಕ್ಕಳಿಗೆ ಉಡುಪು ವಿತರಿಸಲಾಯಿತು.
ಆದರ್ಶ ಸಂಸ್ಥೆ ನಿದರ್ೇಶಕ ಜೇಕಬ್ ವಗರ್ೀಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗಿತಿಸಿದರು. ಜಯಶ್ರೀ ವರದಿ ವಾಚಿಸಿದರು. ಲೋನಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ಮನವಿ ಓದಿದರು. ಪದ್ಮಲತಾ ವಂದಿಸಿದರು.
ನವಜೇತನ ವಿವಿದೋದ್ಧೇಶ ಸೌಹಾರ್ದ ಸಹಕಾರಿ, ಕಾರ್ಕಳದ ಅರುಣೋದಯ ವಿಶೇಷ ಮಕ್ಕಳ ಶಾಲೆ, ವೇಣೂರು ಕ್ರಿಸ್ತರಾಜ ನವಚೇತನ ವಿಶೇಷ ಮಕ್ಕಳ ಶಾಲೆ, ಆಳ್ವಾಸ್ ವಿಶೇಷ ಮಕ್ಕಳ ಶಾಲೆ, ಕಾರ್ಕಳ ಚೇತನ ವಿಶೇಷ ಮಕ್ಕಳ ಶಾಲೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಗಿನ್ನಿಸ್ ದಾಖಲೆವೀರ ವಿಕಲಚೇತನ ಜಾದೂಗಾರ ಸುರೇಶ್ ನಾಯಕ್ ಅವರಿಂದ ಜಾದೂ ಪ್ರದರ್ಶನ ಹಾಗೂ ವಿಕಲಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು’

By suddi9

Leave a Reply

Your email address will not be published. Required fields are marked *