ಬಂಟ್ವಾಳ: ತಾಲೂಕಿನ ಕೆಲಿಂಜ ದ.ಕ.ಜಿ ಪಂ.ಹಿ. ಪ್ರಾ ಶಾಲೆಯ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ವಿಶೇಷ ದಾಖಲಾತಿ ಆಂದೋಲನ ನಿಮಿತ್ತ ದಾಖಲಾತಿ ಆಂದೋಲನದ ಘೋಷಣೆಗಳನ್ನು ಹೇಳುತ್ತಾ ಶಾಲಾ ವಿದ್ಯಾರ್ಥಿಗಳು , ಶಿಕ್ಷಕರು , ಪೋಷಕರು, ಶಾಲಾ ಮೇಲುಸ್ತುವಾರಿ ಸಮಿತಿಯವರು ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಶಾಲಾ ಪರಿಸರದಲ್ಲಿ ಮೆರವಣಿಗೆಯನ್ನು ನಡೆಸಿದರು.

ಮಕ್ಕಳಿಗೆ ಬಲೂನುಗಳನ್ನು ನೀಡಿ, ಹೂ ಮಳೆ ಸುರಿಸಿ ಪನ್ನೀರು ಎರಚಿ, ಸಿಹಿ ತಿಂಡಿ ವಿತರಿಸುವುದರೊಂದಿಗೆ ಸ್ವಾಗತಿಸಲಾಯಿತು.ನಂತರ ಸಭಾ ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೋಹಿತ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಶಾಲಾ ಹಳೆ ವಿದ್ಯಾರ್ಥಿ ಸಂಘದವರು ವತಿಯಿಂದ ಈ ವರ್ಷ ದಾಖಲಾದ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್ ಗಳನ್ನು ನೀಡಿ ಪ್ರೋತ್ಸಾಹಿಸಿದರು.ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
10ನೇ ತರಗತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ,ವಿಟ್ಲ ಹೈಸ್ಕೂಲ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ, ಶಾಲಾ ಹಿರಿಯ ವಿದ್ಯಾರ್ಥಿನಿ ಕು. ನಿಧಿ ಯನ್ನು ಗೌರವಿಸಲಾಯಿತು
ವೀರಕಂಭ ಗ್ರಾಮ ಪಂಚಾಯತ್ ಉಪಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರಾದ ಸಂದೀಪ್ ಪೂಜಾರಿ,ಅಕ್ಷರ ದಾಸೋಹ ನಿರ್ದೇಶಕರಾದ ನೋಣಯ್ಯ ನಾಯ್ಕ್ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತಡ್ಕ ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಜಯಂತಿ, ದೇವಪ್ಪ ಗೌಡ ಪಾಲ್ತಿಮಾರ್ ಉಪಸ್ಥಿತರಿದ್ದರು.
ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಉಷಾ ಸುವರ್ಣ ಪ್ರಸ್ತಾವನೆಗೈದರು,ಗೌರವ ಶಿಕ್ಷಕಿ ಜಯಶ್ರೀ ಸಹಕರಿಸಿದರು. ಶಿಕ್ಷಕಿ ಅಶ್ವಿತಾ ವಂದಿಸಿದರು.
