ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಧರ್ಮಪತ್ನಿ ಮತ್ತು ಮಕ್ಕಳೊಂದಿಗೆ ಬಂದು ಗುರುವಾರ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಪೂಜೆ ನೆರವೇರಿಸಿದರು.

ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಪವಿತ್ರಪಾಣಿ ಮಾಧವ ಭಟ್,ಕೆ ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಇವರ ಸಹಕಾರದೋಂದಿಗೆ ಪದ್ಮನಾಭ ಭಟ್ , ಅನಂತಪದ್ಮನಾಭ ಭಟ್ ,ಆದರ್ಶ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸುದೇಶ್ ರೈ, ಸದಾನಂದ ರೈ ಇದ್ದರು. ನಂತರ ಸುದ್ದಿ೯ ನೊಂದಿಗೆ ಮಾತನಾಡಿದ ಅವರು ಅನರೋಗ್ಯದಿಂದ ಇದ್ದ ನನಗೆ ನನ್ನ ಆತ್ಮೀಯರೊಬ್ಬರು ಈ ಕ್ಷೇತ್ರಕ್ಕೆ ಬಂದು ಚಂಡಿಕಾಹೊಮ ಮಡಲು ತಿಳಿಸಿದರು. ಇದು ನನ್ನ ಭಾಗ್ಯ ನಾನು ಈಗ ಆರೋಗ್ಯದಿಂದಿದ್ದೇನೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರಮೋದೀಜಿಗೆ ಹಾಗೂ ಗಡಿಕಾಯುವ ನಮ್ಮ ಸೈನಿಕರಿಗೆ ಒಳ್ಳೆಯ ಆರೋಗ್ಯ ನೀಡಲು ದೇವಿಯಲ್ಲಿ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದರು.

By suddi9

Leave a Reply

Your email address will not be published. Required fields are marked *