ಬಂಟ್ವಾಳ: ಯುವ ಸಮಾಜ ದುಶ್ಚಟಗಳಿಂದ ದೂರವಿದ್ದು, ಸಮಾಜ ಸೇವೆಯತ್ತ ಒಲವು ಬೆಳೆಸಿಕೊಂಡಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಸಮಾಜ ಮುಖಿ ಸೇವೆಗಳಿಂದ ಮುರುಘೇಂದ್ರ ಮಿತ್ರ ಮಂಡಳಿ ಮಾದರಿಯಾಗಿದೆ ಎಂದು ಬೆಂಗಳೂರು ಜಿಲ್ಲಾ ನ್ಯಾಯಾಽಶ ದಿನೇಶ್ ಹೆಗ್ಡೆ ಬದ್ಯಾರು ಅವರು ಹೇಳಿದರು.

ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಇದರ ೪೪ ನೇ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ೩೪ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  


  ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ದೇಶದ ಆಸ್ಮಿತೆಗೆ ಧಕ್ಕೆ ತರುವವರ ವಿರುದ್ಧ ಹೋರಾಡಬೇಕಾಗಿದೆ. ನಮ್ಮನ್ನು ಕಾಯುವ ನಮ್ಮ ವೀರ ಸೇನಾನಿಗಳಿಗೆ ಯಶಸ್ಸು ಪಡೆಯಲೆಂದು ಪ್ರಾರ್ಥಿಸೋಣ ಎಂದು ಹೇಳಿದರು.


  ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಜಯ ಪ್ರಕಾಶ್ ರಾವ್(ಬೆಳ್ಳಿ ಪದಕ ಪುರಸ್ಕೃತ ಕೆಎಸ್‌ಆರ್‌ಟಿಸಿ ಚಾಲಕ), ಸುರೇಶ್ ಶೆಟ್ಟಿ (ಕೆಪಿಎಸ್ ಮುಖ್ಯ ಶಿಕ್ಷಕ),ಮೋಕ್ಷಾ (ಎಸ್ಸೆಸೆಲ್ಸಿ ಸಾಧಕಿ) ಅವರನ್ನು ಸಮ್ಮಾನಿಸಲಾಯಿತು.
 ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ, ಉದ್ಯಮಿ ಓಂ ಪ್ರಸಾದ್, ಪುಂಜಾಲಕಟ್ಟೆ ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು, ಬಂಟ್ವಾಳ ಸ.ಪ್ರೌ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪಿಲಾಬೆಟ್ಟು ಪ್ರಾ.ಕೃ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಬಿತಾ ದಿನೇಶ್, ಪುಂಜಾಲಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅನಿಲಡೆ, ಮಂಜಲಪಲ್ಕೆ ಶ್ರೀ ಜೈ ಹನುಮಾನ್ ಭಜನ ಮಂದಿರದ ಅಧ್ಯಕ್ಷ ಸಂದೀಪ್ ಹಟ್ಟತ್ತೋಡಿ, ಶ್ರೀರಾಮನಗರ ಶ್ರೀರಾಮಾಂಜನೇಯ ಭಜನ ಮಂದಿರ ಅಧ್ಯಕ್ಷ ಯಶೋಧರ ನಾಕುನಾಡ್, ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಮೋಹನ್, ಗೌರವಾಧ್ಯಕ್ಷೆ ಆಶಾ ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು. ಮಂಜಪ್ಪ ಮೂಲ್ಯ ವರದಿ ವಾಚಿಸಿದರು. ಪುಷ್ಪಲತಾ ಮತ್ತು ರತ್ನದೇವ್ ಸನ್ಮಾನ ಪತ್ರ ವಾಚಿಸಿದರು. ಮುರಳೀ ಅತ್ತಾಜೆ ವಂದಿಸಿದರು. ಎಚ್‌ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *