ಬಂಟ್ವಾಳ: ತಾಲೂಕಿನ ಬಿ.ಸಿ.ರೋಡಿಗೆ ಸಮೀಪದಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದಲ್ಲಿ ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ಪಲ್ಲಮಜಲು ಮತ್ತುಶ್ರೀ ಮಹಾ ಪವಮಾನಯಾಗ ಸಮಿತಿ ಪಲ್ಲಮಜಲು ಇದರ ಆಶ್ರಯದಲ್ಲಿ ೧೦೮ ಪವಮಾನ ಪಾರಾಯಣ ಸಹಿತ ಶ್ರೀ ಮಹಾಪವಮಾನ ಯಾಗ, ೧೦೮ ಲಕ್ಷ ಶ್ರೀರಾಮ ತಾರಕ ಮಂತ್ರ ಜಪಯಜ್ಞ,ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ ಮತ್ತು ವಿಷ್ಣು ಸಹಸ್ರನಾಮ ಪಾರಾಯಣಮೇ 16 ರಿಂದ 18 ರ ವರೆಗೆ ನಡೆಯಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು ಅವರು ತಿಳಿಸಿದ್ದಾರೆ.

ಶನಿವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ದೈವಜ್ಞರಾದ ಶಶಿಕುಮಾರ್ ಪಂಡಿತ್ ಅವರ ಮಾರ್ಗದರ್ಶನ,ವೇ.ಮೂ.ವಿನಾಯಕ ಕಾರಂತರ ಪೌರೋಹಿತ್ಯದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಮಠಾಧೀಶರು,ಆರ್ ಎಸ್ ಎಸ್ ಮುಖಂಡರಾದ ಡಾ.ಪ್ರಭಾಕರ ಭಟ್ ಅವರ ಉಪಸ್ಥಿತಿಯಲ್ಲಿ ಈ ಯಾಗ ನಡೆಯಲಿದೆ ಎಂದರು.
ಮೇ.16 ರಂದು ಸಂಜೆ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಹಸಿರುಹೊರೆಕಾಣಿಕೆಯ ಮೆರವಣಿಗೆ,ಋತ್ವಿಜರ ಅಗಮನ,ಉಗ್ರಾಣಮುಹೂರ್ತ ಬಳಿಕ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದೆ.ಮೇ.17 ರಂದು ಬೆಳಿಗ್ಗೆ ಹೋಮಾದಿಗಳು,ಯಾಗ ಸಂಕಲ್ಪ,ಪವಮಾನ ಸುಇಕ್ತಪಾರಾಯಣ,ವಿಷ್ಣಸಹಸ್ರನಾಮ ಪಾರಾಯಣ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ,ಸಂಜೆ ಭಜನಾ ಸಂಕೀರ್ತನೆ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ ಎಂದರು.
ಮೇ.18 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಅರಣಿ ಮಂಥನ, ಪವಮಾನಸೂಕ್ತಪಾರಾಯಣ ಬಳಿಕ ಶ್ರೀರಾಮ ತಾರಕ ಜಪಯಜ್ಞ,ಶ್ರೀ ಅಂಜನೇಯ ದೇವರಿಗೆ ಸಹಸ್ರಕದಳಿ ಯಾಗ,ಶ್ರೀಪವಮಾನಯಾಗ ಆರಂಭವಾಗಲಿದೆ.ಮಧ್ಯಾಹ್ನ ಯಾಗದ ಪೂರ್ಣಾಹುತಿಯಾಗಲಿದ್ದು,ಮಹಾಪೂಜೆ ನಂತರ ಅನ್ನಸಂತರ್ಪಣೆ ಇರಲಿದೆ.ಇದೇ ವೇಳೆ ಯಾಗದ ಮಹತ್ವದ ಬಗ್ಗೆ ವಿಶ್ಲೇಷಣೆ ಹಾಗೂ ಧನ್ಯೋತ್ಸವ ಕಾರ್ಯಕ್ರಮ ಜರಗಲಿದೆ ಎಂದು ವಿವರಿಸಿದರು.
ಲೋಕಕಲ್ಯಾಣ, ಸಾಮಾಜಿಕ ಸಾಮರಸ್ಯಕ್ಕಾಗಿ ಯಾಗ:
ಈ ಸಂದರ್ಭ ಹಾಜರಿದ್ದ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ,
ರಾ.ಸ್ವ.ಸೇ.ಸಂಘವು 100 ವರ್ಷ ಪೂರೈಸುತ್ತಿರುವ ಶುಭ ಸಂದರ್ಭದ ಭಾಗವಾಗಿ ಮತ್ತು ಸಮಸ್ತ ಹಿಂದೂ ಸಮಾಜದಲ್ಲಿ ಸಾಮರಸ್ಯದ ವಾತಾವರಣ ಮೂಡಿಸುವುದು ಹಾಗೂ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ಉದ್ದೇಶದ ಜತೆಗೆ ಲೋಕಕಲ್ಯಾಣಾರ್ಥವಾಗಿ ಯಾಗ ನಡೆಯಲಿದೆ.ಇದೇ ವೇಳೆ ಭಾರತದ ಗಡಿಯಲ್ಲಿ ಕಾದಾಡುತ್ತಿರುವ ಭಾರತದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬಲು ಪ್ರಾರ್ಥಿಸಲಾಗುತ್ತದೆ. ಹಿಂದು ಸಮಾಜದ ಎಲ್ಲ ಸಮುದಾಯಗಳ ಜನರು ಯಾಗಕ್ಕೆ ದಂಪತಿ ಸಮೇತರಾಗಿ ಆಗಮಿಸಿ ಹವಿಸ್ಸು ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಯಾಗ ಕೇವಲ ಇಲ್ಲಿಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಜಿಲ್ಲೆಗೂ ವಿಸ್ತರಿಸುವ ಚಂತನೆಯಿದೆ ಎಂದ ಅವರು ಯಾಗದ ಪೂರ್ಣಾಹುತಿ ದಿನ ಶ್ರೀರಾಮ ಭಕ್ತಾಂಜನೇಯ ಮಂದಿರದ ಅನ್ನಛತ್ರಲೋಕಾರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಸಂದೇಶ್ ಬ್ರಹ್ಮರಕೂಟ್ಟು, ಕೋಶಾಧಿಕಾರಿ ಹರಿಪ್ರಸಾದ್ ಭಂಡಾರಿಬೆಟ್ಟು, ಶ್ರೀರಾಮಭಕ್ತಾಂಜನೇಯ ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ದಾಸ್ ಕಾಮೇರಕೋಡಿ, ಪ್ರಮುಖರಾದ ಜಗದೀಶ ಹೊಳ್ಳ ಉಪಸ್ಥಿತರಿದ್ದರು.
