ಕೈಕಂಬ: ಗುರುಪುರ ಗೋಳಿದಡಿ ಗುತ್ತಿನ ಸನಿಹದಲ್ಲಿ ಹರಿಯುವ ಪಲ್ಗುಣಿ ನದಿ ತಟದಲ್ಲಿ, ದೇಶದಲ್ಲಿಯೇ ಪ್ರಥಮವಾಗಿರುವ ನಿಂತಿರುವ ಭಂಗಿಯ ಶ್ರೀ ಗುರು ಮಹಾಕಾಲೇಶ್ವರನ ಏಕ ಶಿಲಾ ಬೃಹತ್ ವಿಗ್ರಹ ಪ್ರತಿಷ್ಠಾ ಬ್ರಹ್ಮ ಕಲಶ ಸಂಭ್ರಮ ಮೇ 15ರಿಂದ ಮೇ17ರವರೆಗೆ ನಡೆಯಲಿದೆ.
ಗುರುಪುರ ಗೋಳಿದಡಿ ಗುತ್ತಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮ ಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

ಗುರುಪುರದಲ್ಲಿ ಬ್ರಹ್ಮಋಷಿ ಕೆ. ಎಸ್. ನಿತ್ಯಾನಂದಗುರುಗಳ ಸಂಕಲ್ಪದೊಂದಿಗೆ ಶಿವನ ಇಚ್ಛೆಯಂತೆ ಭಾರತದಲ್ಲಿಯೇ ಪ್ರಥಮದ್ದಾದ ಇಪ್ಪತ್ತ ಎರಡೂವರೆ ಅಡಿ ಎತ್ತರದ ಪದ್ಮ ಪೀಠದ ಮೇಲೆ 23 ಅಡಿ ಎತ್ತರದ ನಿಂತ ಭಂಗಿಯ ಶ್ರೀ ಮಹಾಕಾಲೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ.
ಇಲ್ಲಿ ಜಾತಿ, ಪಂಥ, ಬಡವ,-ಬಲ್ಲಿದ ಎಂಬ ಭೇಧ, ಲಿಂಗ ಭೇದವಿಲ್ಲದೇ ಸಂಪ್ರದಾಯಿಕ ವಸ್ತ್ರ ಧರಿಸಿ ಶ್ರೀ ಮಹಾಕಾಲೇಶ್ವರನಿಗೆ ಸ್ವತ ತಾವೇ ಪೂಜೆ ಸಲ್ಲಿಸುವ ಅವಕಾಶವಿದೆ. ಮೇ14ರ ಬುಧವಾರ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.15ರ ಗುರುವಾರ ವಿವಿಧ ಧಾರ್ಮಿಕ ವಿಧಿಗಳು ಹಾಗೂ ಅಪರಾಹ್ನ 4ಗಂಟೆಯಿಂದ ಪಂಚಕಲ್ಯಾಣಯುಕ್ತ ಬ್ರಹ್ಮ ಕಳಶಾಭಿಷೇಕ ಆರಂಭಗೊಳ್ಳಲಿದೆ.
16ರ ಶುಕ್ರವಾರ ದೇವಸ್ಥಾನದ ಕಾರ್ಯಾಲಯ, ಅತಿಥಿ ಗ್ರಹ, ಸಭಾಂಗಣವನ್ನು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಬ್ರಹ್ಮ ಋಷಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳು ಸಾನಿಧ್ಯಕ್ಕೆ ಸಮರ್ಪಿಸಲಿದ್ದಾರೆ.
17ರ ಶುಕ್ರವಾರ ಶಿವಾನುಭವ ಧಾರ್ಮಿಕ ಸಭೆ ನಡಯಲಿದೆ.
ನಿರಂತರವಾಗಿ ಭಗವದ್ಗೀತಾ ಪ್ರವಚನ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಊಟೋಪಚಾರ ನಡೆಯಲಿದೆ. ಪಾಲ್ಗೊಲ್ಲುವ ಭಕ್ತಾದಿಗಳಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಸಮಿತಿಗಳ ರಚನೆ ಮಾಡಲಾಗಿದೆ ಎಂದರು.
ಗೋಳಿದಡಿಗುತ್ತಿನ ಗಡಿಕಾರ,ಸುಕ್ಷೇತ್ರಾಧಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,ಶ್ರೀ ಗುರು ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ)ನ ಕಾರ್ಯದರ್ಶಿ ಶ್ರೀಮತಿ ಉಷಾ ಪ್ರಸಾದ ಶೆಟ್ಟಿ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಸ್ವಾಗತ ಸಮಿತಿಯ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ಯಶವಂತ ಸಾಲ್ಯಾನ್ ಮೂಲ್ಕಿ, ನಾರಾಯಣ ಪ್ರಭು, ಸತೀಶ್ ಕಾವ, ಶ್ರೀಮತಿ ಸುನೀಲಾ ಪ್ರಭಾಕರ ಶೆಟ್ಟಿ ಮತ್ತು ಶ್ರೀಮತಿ ದಿವ್ಯಾ ರತನ್ ಶೆಟ್ಟಿ ಉಪಸ್ಥಿತರಿದ್ದರು.
