ಬಂಟ್ವಾಳ : ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾ ಚಂದ್ರ ಜೈನ್ ರವರ ಅಭಿನಂದನಾ ಕಾರ್ಯಕ್ರಮ  ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು .


ಬಂಟ್ವಾಳ ಜೈನ್ ಮಿಲನ್  ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ವೇಳೆ ಸಿದ್ಧಕಟ್ಟೆಯ ಖ್ಯಾರ ವೈದ್ಯರಾದ ಪ್ರಭಾಚಂದ್ರ ಜೈನ್ ಅವರನ್ನು  ಸನ್ಮಾನಿಸಲಾಯಿತು.
ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವರಾದ  ಬಿ ರಮಾನಾಥ ರೈ ಮಾತನಾಡಿ, ಡಾ.ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಅವರನ್ನು ಸನ್ಮಾನಿಸಿರುವುದು ಸ್ತುತ್ಯಾರ್ಹವಾಗಿದೆ ಎಂದರು. ನಲ್ಲೂರಂಗಡಿ ಬಸದಿಯ ಮೊಕ್ತೇಸರರು, ಮಾಜಿ ಸಚಿವ ಕೆ .ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ ಎಂದರು . ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು.
ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು.  ರಶ್ಮಿತ ಯುವರಾಜ್ ಜೈನ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರಮುಖರಾದ ಸುಭಾಶ್ಚಂದ್ರ ಜೈನ್ , ಜಯರಾಜ ಕಂಬಳಿ,  ರಾಜೇಶ್ ಕುಮಾರ್ ,ಪುಷ್ಪರಾಜ್ ,  ಶ್ವೇತಾ ಜೈನ್ ,  ಶಶಿಕಲಾ, ಗೀತಾ ಜಿನ ಚಂದ್ರ ಉಪಸ್ಥಿತರಿದ್ದರು . ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವ ಮಂಗಳ ಮಹಿಳಾ ಸಂಘದ ಅಧ್ಯಕ್ಷರು, ಸದಸ್ಯರು  ಪಾಲ್ಗೊಂಡಿದ್ದರು.
ಆಶಾ ಸುಧಾಕರ್ ಮತ್ತು  ಅರ್ಪಿತಾ ಪ್ರಾಣೇಶ್ ಪ್ರಾರ್ಥಿಸಿದರು .  ಉದಯ್ ಕುಮಾರ್ ಜೈನ್ ಸ್ವಾಗತಿಸಿದರು‌.  ನಿರಂಜನ್ ಕುಮಾರ್ ವಂದಿಸಿದರು. ಭರತ್ ಕುಮಾರ್ ಮತ್ತು  ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *