ಬಂಟ್ವಾಳ: ಕಾಶ್ಮೀರದ  ಪಹಲ್ಗಾಮ್ ನಲ್ಲಿ ಅಮಾಯಕ,ಮುಗ್ದ 27 ಮಂದಿ ಭಾರತೀಯರನ್ನು ಹತ್ಯೆಗೈದ ಪಾಪಿ ಪಾಕಿಸ್ತಾನದ ಭಯೋತ್ಪಾದಕರ ಪೈಶಾಚಿಕ ಕೃತ್ಯವನ್ನು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಂಗಳವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ‌ ಖಂಡನಾ ನಿರ್ಣಯ ಕೈಗೊಂಡು ಕೇಂದ್ರ ಸರಕಾರದ ಗೃಹ  ಸಚಿವಾಲಯಕ್ಕೆ ಕಳಿಹಿಸಿಕೊಡಲು ತೀರ್ಮಾನಿಸಿದೆ.

ಅದೇರೀತಿ ಸಭೆಯಲ್ಲಿ ಮಡಿದ ಹಿಂದೂಗಳ ದಿವ್ಯಾತ್ಮಕ್ಕೆ ಸದ್ಗತಿ ಪ್ರಾಪ್ತಿಗಾಗಿ ,ಅಗಲಿದ ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ಭಗವಂತ ನೀಡುವಂತೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು .
  ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಕರ್ಪೆ ಅವರು ಮಾತನಾಡಿ,ಉಗ್ರರ ದಾಳಿಯನ್ನು ಖಂಡಿಸುವುದರೊಂದಿಗೆ ಭಾರತೀಯರೆಲ್ಲರೂ  ಕೇಂದ್ರ ಸರಕಾರ ಕೈಗೊಳ್ಳುವ  ನಿರ್ಧಾರಗಳಿಗೆ ಮತ್ತು ಭಾರತೀಯ ಸೇನಾ ಪಡೆಗಳು ನಡೆಸುವ ಎಲ್ಲಾ ಕಾರ್ಯವನ್ನು ಬೆಂಬಲಿಸಿ ರಾಷ್ಟ್ರದ ಭದ್ರತೆಗೆ  ಸಹಕರಿಸಬೇಕು, ರಾಷ್ಟ್ರದ ವಿಚಾರ ಬಂದಾಗ ಜಾತಿ, ಧರ್ಮವನ್ನೂ ಬದಿಗಿಟ್ಟು ದೇಶದ ಬಗ್ಗೆ ಚಿಂತನೆ ಮಾಡುವ ಅಗತ್ಯತೆ ಇದೆ ಎಂದರು.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ,ನಿರ್ದೇಶಕರಾದ ರಶ್ಮಿತ್ ಶೆಟ್ಟಿ ಮಾತನಾಡಿದರು.
ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ , ಚಂದ್ರಶೇಖರ ಶೆಟ್ಟಿ , ವಿಶ್ವನಾಥ ಶೆಟ್ಟಿಗಾರ್, ಜಾರಪ್ಪ ನಾಯ್ಕ, ಶಿವಗೌಡ, ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ , ಹಾಗೂ ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಭಾಕರ ಹೆಚ್,  ಆರಂಬೋಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಆಶಾ ಶೆಟ್ಟಿ ವೇದೊಕೆಯಲ್ಲಿದ್ದರು. ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *