ಬಂಟ್ವಾಳ: ಪ್ರಸ್ತುತ ಕಾಲಘಟ್ಟದಲ್ಲಿ  ಧರ್ಮ ಶಿಕ್ಷಣ ನೀಡುವ ಅಗತ್ಯ ವಿದ್ದು, ಶ್ರದ್ಧಾ ಕೇಂದ್ರಗಳು ಮತ್ತು ಭಜನಾ ಮಂದಿರಗಳು ಧರ್ಮ ಶಿಕ್ಷಣ ಬೋಧಿಸುವ ಕೇಂದ್ರಗಳಾಗಬೇಕು ಎಂದು ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ  ಡಾ ಅರುಣ್ ಉಳ್ಳಾಲ್ ರವರು ಹೇಳಿದ್ದಾರೆ.


ಬಂಟ್ವಾಳ ತಾಲೂಕಿನ ಕೊಡ್ಮಾಣ್ ಗ್ರಾಮದ ಪೊಡಿಕಲ ಶ್ರೀ ಜೈ ಹನುಮಾನ್ ಮಂದಿರದ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು .
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀಜಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಯವರು ಪಾರಿಜಾತದ ಗಿಡ ಗೆಡುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
  ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ,  ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ,ಸ್ಥಳ ದಾನಿಗಳಾದ ಗುಂಡೀಲಗುತ್ತು ಅಜಿತ್  ಕುಮಾರ್  ಶೆಟ್ಟಿ, ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ ,  ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಸಮಿತಿ ಗೌರಾವಾಧ್ಯಕ್ಷರಾದ ಕೊಟ್ಟಿಂಜ ಪದ್ಮನಾಭ ಶೆಟ್ಟಿ , ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ , ಪ್ರದಾನ ಸಂಚಾಲಕರಾದ ತಾರನಾಥ ಕೊಟ್ಟಾರಿ ತೇವು ,ಕಾರ್ಯದರ್ಶಿ ದಾಮೋದರ ನೆತ್ತರಕೆರೆ ,   ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು , ಚಿತ್ತರಂಜನ್ ಕಂಬ್ಲ , ಮಹಿಳಾ ಘಟಕದ  ಅಧ್ಯಕ್ಷರಾದ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *