ಅಕ್ರಮ ಸಂಬಂಧಕ್ಕಾಗಿ 4 ವರ್ಷದ ಮಗುವನ್ನು ಕೊಲೆ ಮಾಡಿರುವ ಶಂಕೆ. ವ್ಯಕ್ತವಾಗಿದೆ. ಹಾವು ಕಚ್ಚಿ ಸಾವನ್ನಪ್ಪಿದೆ ಎಂದು ಸುಳ್ಳು ಹೇಳಿದ್ದ 24 ವರ್ಷದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ. ಚಂದ್ರಶೇಖರ್ ಎಂಬ ಮಲತಂದೆ ಬಂಧನವಾಗಿದೆ. ತುಮಕೂರು ಮಹಿಳಾ ಪೊಲೀಸರಿಂದ ಬಂಧನ ಮಾಡಲಾಗಿದೆ. ಮಿಥುನ್‌ಗೌಡ (4) ಕೊಲೆಯಾದ ಮಗು ಎಂದು ಗುರುತಿಸಲಾಗಿದೆ ಚಾಮರಾಜನಗರ ಮೂಲದ ಚಂದ್ರಶೇಖರ್‌ ಮತ್ತು ಕಾವ್ಯಾ ತುಮಕೂರು ತಾಲೂಕಿನ ಸಿದ್ಧಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ದರು.ಕಾವ್ಯಾಗೆ ಈಗಾಗಲೇ ಅಶೋಕ ಎಂಬುವರ ಜತೆ ಮದುವೆಯಾಗಿತ್ತು. ಪ್ರಗ್ನೆಂಟ್ ಇದ್ದಾಗಲೇ ಚಂದ್ರಶೇಖರ್ ಜೊತೆ ಓಡಿ ಬಂದಿದ್ದ ಕಾವ್ಯ.
ಬಳಿಕ ಮಿಥುನ್ ಗೌಡಗೆ ಜನ್ಮ ನೀಡಿದ್ದಾಳೆ. ಮಿಥುನ್ ವಿಚಾರದಲ್ಲಿ ಇಬ್ಬರ ಮಧ್ಯೆ ಕಲಹ ಉಂಟಾಗಿತ್ತು.
ಚಂದ್ರಶೇಖರ್‌ ಕ್ರಷರ್ ನಲ್ಲಿ ಲಾರಿ ಡ್ರೈವರ್. ಕಾವ್ಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮಾರ್ಚ್‌ 20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಗು ಮೇಲೆ ಚಂದ್ರಶೇಖರ್‌ ಹಲ್ಲೆ ಮಾಡಿದ್ದು, ಪ್ರಜ್ಞೆ ತಪ್ಪಿತ್ತು.

ಅಕ್ಕಪಕ್ಕದ ಮನೆಯವರಿಗೆ ಮಗುವಿಗೆ ಹಾವು ಕಚ್ಚಿದೆ ಎಂದು ಹೇಳಿದ್ದ ಆರೋಪಿ ಚಂದ್ರಶೇಖರ್. ಗ್ರಾಮಸ್ಥರು ಕೂಡಲೇ ಚಿಕಿತ್ಸೆಗೆ ಊರ್ಡಿಗೆರೆ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಪರೀಕ್ಷೆ ನಡೆಸಿ ಮಿಥುನ್‌ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅಂತ್ಯಕ್ರಿಯೆಗೂ ಮುನ್ನ ಸಿದ್ಧಲಿಂಗಯ್ಯನಪಾಳ್ಯದ ಎಸ್‌.ಆರ್‌.ಗಂಗಾಧರಯ್ಯ ಎಂಬುವರು ಮಿಥುನ್‌ ಫೋಟೊ ತೆಗೆದುಕೊಂಡಿದ್ದರು. ಮಾರ್ಚ್‌ 22ರಂದು ಮತ್ತೊಮ್ಮೆ ಫೋಟೊ ನೋಡಿದಾಗ ಸಾವಿನ ಬಗ್ಗೆ ಅನುಮಾನ.
ಈ ಕುರಿತು ಗ್ರಾಮಸ್ಥರು ಸೇರಿ ಚಂದ್ರಶೇಖರ್‌ರನ್ನು ವಿಚಾರಿಸಿದಾಗ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾನೆ.

ಗಂಗಾಧರಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು.. ಇಂದು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಸಿದ್ದಲಿಂಗಯ್ಯನ ಪಾಳ್ಯದ ಜಮೀನೊಂದರಲ್ಲಿ ಮಗುವಿನ ಶವ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇತ್ತ ತಾಯಿ ಕಾವ್ಯಾಳ ನಡವಳಿಕೆಯಲ್ಲಿ ಸಾಕಷ್ಟು ಅನುಮಾನ ಕಾರಣವಾಗಿದೆ. ಮೊದಲ ಪತಿಯನ್ನ ಬಿಟ್ಟು ಬಂದು ಚಂದ್ರಶೇಖರ್ ಜೊತೆ ಇದ್ದಳು. ಸ್ವಂತ ನೆಲೆಯಿಲ್ಲದೇ ಅಲ್ಲಲ್ಲಿ ವಾಸ ಮಾಡ್ತಿದ್ದ ಕಾವ್ಯ ಹಾಗೂ ಚಂದ್ರಶೇಖರ್.

By suddi9

Leave a Reply

Your email address will not be published. Required fields are marked *