ಮಂಗಳೂರು: ಬಡ ಜನರ ಬ್ಯಾಂಕ್‌ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಹಸೀಲ್ದಾರ್‌ ಗಲ್ಲಿಯ ಅವಿನಾಶ್‌ ಸುತಾರ್ (‌28), ರಾಮದೇವ ಗಲ್ಲಿಯ ಅನೂಪ್‌ ಕಾರೇಕರ್‌ (42)ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಸೈಬರ್‌ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಖತರ್ನಾಕ್ ಪ್ಲ್ಯಾನ್​ ಬೆಳಕಿಗೆ ಬಂದಿದ್ದು, ಮುಗ್ದ ಜನರ ಬ್ಯಾಂಕ್‌ ಖಾತೆಯೇ ಇವರಿಗೆ ಖಜಾನೆಯಾಗಿದೆ. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್‌ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್‌ ಲೈನ್‌ ಬ್ಯುಸಿನೆಸ್‌ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಮುಗ್ದರ ಬ್ಯಾಂಕ್‌ ಖಾತೆ ಮಾಹಿತಿಯನ್ನು ಸೈಬರ್‌ ವಂಚಕರ ಕೈಗಿಡುತ್ತಿದ್ದರು.

ನಂತರ, ಸೈಬರ್​ ವಂಚಕರು ಈ ಬ್ಯಾಂಕ್​ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್‌, ಡಿಜಿಟೆಲ್‌ ಅರೆಸ್ಟ್‌ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ.

By suddi9

Leave a Reply

Your email address will not be published. Required fields are marked *