ಬಂಟ್ವಾಳ: ಬೆಳಗಾವಿಯ ರಾಯಬಾಗ ತಾಲೂಕಿನ ಅರಿಬೆಂಚಿ ನಿವಾಸಿ ಬಾಳಪ್ಪ ತೇಗ್ಯಾಲ್ (28) ಎಂಬವರು ಸಜಿಪನಡು ಗ್ರಾಮಾಂತರ ಅಂಚೆ ಕಚೇರಿಯ ಅಂಚೆಚೀಟಿಯಲ್ಲಿದ್ದ 72 ಸಾವಿರ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾರೆ. ಸಜಿಪನಡು ಗ್ರಾಮದಲ್ಲಿ ಸಹಾಯಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗಿದೆ. ಬಾಳಪ್ಪ ಕಳೆದ ವರ್ಷದಿಂದ ಸಜಿಪಪದವಿನಲ್ಲಿ ಸಹಾಯಕ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫೆ.19ರಂದು ಸಜಿಪನಡು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅಸ್ಮಿನಾ ಬಾನು ಅವರಿಗೆ ಅಂಚೆ ಚೀಲವನ್ನು ನೀಡಿ. ಪಾಣೆ ಮಂಗಳೂರು ಅಂಚೆ ಕಚೇರಿಗೆ ತಲುಪಿಸುವಂತೆ ಸೂಚಿಸಿದ್ದರು. ಅವರನ್ನು ಸಂಪರ್ಕಿಸಲು ಫೋನ್​ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಬಂದಿದೆ.

ಸಜಿಪಮೂಡ ಗ್ರಾಮದ ಕಂದೂರಿನಲ್ಲಿರುವ ಬಾಳಪ್ಪ ತೇಗ್ಯಾಲ್ ಬಾಡಿಗೆ ಮನೆಗೆ ಅಧಿಕಾರಿಗಳು ಭೇಟಿ ನೀಡಿದಾಗ ಅಲ್ಲಿ ಅಂಚೆಚೀಟಿ ಹಣದ ಜತೆಗೆ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಅಸ್ಮಿನಾ ಬಾನು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *