ತಾಲೂಕು ಮಟ್ಟದ ನರೇಗಾ ಪ್ರಶಸ್ತಿ

ಕೈಕಂಬ: ಮಂಗಳೂರು ತಾಲೂಕಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿದ ಸ್ಥಳೀಯಾಡಳಿತ ಸಂಭ್ರಮ `ಹೊಂಬೆಳಕು-೨೦೨೫’ರಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ೨೦೨೪-೨೫ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನ ಸೃಜನೆಗಾಗಿ ತಾಲೂಕು ಮಟ್ಟದ ಅತ್ಯುತ್ತಮ ಪ್ರಶಸ್ತಿ ಪಡೆಯಿತು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ತು ಸದಸ್ಯ(ಎಂಎಲ್‌ಸಿ) ಮಂಜುನಾಥ ಭಂಡಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಅವರು ಹಾಜರಿದ್ದ ಸಮಾರಂಭದಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ, ಪಿಡಿಒ ಅಬೂಬಕ್ಕರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನೀರುಮಾರ್ಗ ಪಂಚಾಯತ್‌ನ ಲೆಕ್ಕ ಸಹಾಯಕ ಉಮಾನಾಥ, ಸಿಬ್ಬಂದಿಗಳಾದ ಸುರೇಖಾ, ಪ್ರಶಾಂತಿ, ಸವಿತಾ, ಯಶೋಧಾ, ಸಂದೇಶ್, ಯಮುನಾ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *