ಬಂಟ್ವಾಳ : ಕಳೆದ ಮೂರು ದಿನಗಳಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳಿಂದ ಮಡೆಯತ್ತಿರುವ ಮುಷ್ಕರದ ಸ್ಥಳಕ್ಕೆ ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ‌ ನೈತಿಕ ಬೆಂಬಲ ಸೂಚಿಸಿದರು.


ತಮ್ಮ ಸಮಸ್ಯೆಗಳು ನೈಜವಾಗಿದ್ದು, ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ. ತಾನು ಮುಷ್ಕರಕ್ಕೆ ಬೆಂಬಲ ಸೂಚಿಸಿ, ಅಧಿವೇಶನ ಸಮಯದಲ್ಲಿ ತಮ್ಮ ಪರವಾಗಿ ಧ್ವನಿಯಾಗುವುದಾಗಿ ಆಶ್ವಾಸನೆ ನೀಡಿದರು. ಈ ಸಂದರ್ಭ ಗ್ರಾಮಾಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅನಿಲ್‌ ಕೆ., ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಶಾಸಕರೊಂದಿಗಿದ್ದರು.

By suddi9

Leave a Reply

Your email address will not be published. Required fields are marked *