ಬಂಟ್ವಾಳ: ಇಲ್ಲಿಯ ತಾಲೂಕಿನ ವಾಮದಪದವು ಸಮೀಪದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯಅಧ್ಯಕ್ಷರಾಗಿ ಶ್ರೀಪಾದ ಪಾಂಗಣ್ಣಾಯ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ಪ್ರಶಾಂತ ಕೋಟ್ಯಾನ್ ಮೇಗಿನ ಮನೆ, ಮಹಾಬಲ ನಾಯ್ಕ ನೇರಳಕಟ್ಟೆ, ನಿಶ್ಚಿತ್ ಶೆಟ್ಟಿ ಮಜಲು, ಮಂಜುನಾಥ ಪೂಜಾರಿ ಬಂಗೇರಕೆರೆ, ಕೊರಗ ಶೆಟ್ಟಿ ನರ್ವಲ್ದಡ್ಡ, ವಿಜಯಲಕ್ಷ್ಮೀ ಶೆಟ್ಟಿ ಪಾಂಗಲ್ಪಾಡಿ, ರೇಣುಕ ಗಟ್ಟಿ ಹಲೆಪ್ಪಾಡಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
