ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ನೇತ್ರಾವತಿ ನದಿ ತೀರದಲ್ಲಿ ಶನಿವಾರ ರಾತ್ರಿ ಸುಮಂಗಳೆಯರಿಂದ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿ ನೆರವೇರಿತು.


ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರುನೇತ್ರಾವತಿ ನದಿಗೆ ಗಂಗಾರತಿ ನೆರವೇರಿಸಿ ಆಶೀರ್ವಚನ ನೀಡಿದರು.


ಶ್ರೀಗಳು ಪುಂಜಾಲಕಟ್ಟೆಯಿಂದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ  ಶ್ರೀ ದೇವಳಕ್ಕೆ ಭೇಟಿ ನೀಡಿ ಸಾಮೂಹಿಕ ವಿಷ್ಣು- ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮತ್ತು ಗಂಗಾರತಿಯಲ್ಲಿ‌ಪಾಲ್ಗೊಂಡರು.ಅದೇರೀತಿ ಬಂಟ್ವಾಳ ಶ್ರೀಕಾಶೀಮಠಕ್ಕು ಚಿತ್ತೈಸಿದರು.ಈ ಸಂದರ್ಭ ದೇವಳದ ಆಡಳಿತಮೊಕ್ತೇಸರರು,ಮೊಕ್ತೇಸರರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *