ಬಜ್ಪೆ: ಹಿಂದೂ ಸಂಘಟನೆಗಳು ಕರೆ ನೀಡಿರುವ ಗುರುಪುರ, ಬಜ್ಪೆ, ವಾಮಂಜೂರು, ಕೈಕಂಬ ಪರಿಸರ ಬಂದ್ ಸಂದರ್ಭ ಖಾಸಗಿ ಸಿಟಿ ಬಸ್, ಟೆಂಪೋ ಹಾಗೂ ರಾಜಹಂಸ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಮುಂಜಾನೆ 9 ಗಂಟೆಯ ಸುಮಾರಿಗೆ ಸಂಭವಿಸಿದೆ. ಸೆಕ್ಷನ್ 144 ಜಡಿದಿದ್ದರೂ ಕಿಡಿಗೇಡಿಗಳು ಮಾತ್ರ ತನ್ನ ಪ್ರತಾಪವನ್ನು ತೋರಿಸಿ ಅಶಾಂತಿಗೆ ಕಾರಣರಾಗಿದ್ದಾರೆ.
ಬೆಳಿಗ್ಗೆ ಆರರ ಸುಮಾರಿಗೆ ಬಜ್ಪೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಫಾತಿಮಾ ಬಸ್ ಗೆ ಕಿಡಿಗೇಡಿಗಳು ಕಲ್ಲೆಸೆದ ಪರಿಣಾಮ ಅದರ ಗಾಜುಗಳು ಧ್ವಂಸಗೊಂಡಿದೆ. ಫಾತಿಮಾ ಬಸ್ನ ಚಾಲಕ ಕೈಗೆ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಟೆಂಪೋ ಹಾಗೂ ಬೆಂಗಳೂರಿನಿಂದ ಬರುತ್ತಿದ್ದ ರಾಜಹಂಸ ಬಸ್ಸಿಗೂ ಗುರುಪುರ, ಕೈಕಂಬ ಪರಿಸರದಲ್ಲಿ ಬೈಕ್ ನಲ್ಲಿ ಬಂದ ದುಷ್ಕಮರ್ಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಕೈಕಂಬ ಎಡಪದವು ಕಿನ್ನಿಗೋಳಿಗೆ ಸಂಚರಿಸುವ ಪಿಂಟೋ ಎನ್ನುವ ಬಸ್ಗೂ ಕಲ್ಲುತೂರಾಟ ನಡೆದಿದ್ದು ಕನ್ನಡಿ ಧ್ವಂಸಗೊಂಡಿದೆ.
ಸೋಮವಾರ ಮುಂಜಾನೆಯಿಂದಲೇ ಗುರುಪುರ, ಕೈಕಂಬ ಮತ್ತು ಆಯಕಟ್ಟಿನ ಜಾಗಗಳಲ್ಲಿ ಘರ್ಷಣೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಇದರ ನಡುವೆಯೂ ದುಷ್ಕಮರ್ಿಗಳು ಬಸ್ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸುವ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ.

DSC_8897 (1)

DSC_8881

DSC_8885

DSC_8886

DSC_8890

DSC_8891

DSC_8892
ಮುಂಜಾನೆ ಕೈಕಂಬ, ಎಡಪದವು, ಬಜ್ಪೆ ಪರಿಸರದಲ್ಲಿ ವಾಹನಗಳಿಗೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಗುರುಪುರ, ಉಳಾಯಿಬೆಟ್ಟು ಪರಿಸರದಲ್ಲಿ ಸೋಮವಾರ ನಸುಕಿನ ಜಾವವೇ ಟೈರ್ ಗಳನ್ನು ರಸ್ತೆ ಮಧ್ಯೆ ಇರಿಸಿ ಬೆಂಕಿ ಹಚ್ಚುವ ಮೂಲಕ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸ್ಥಳೀಯ ಬೇಕರಿಯೊಂದಕ್ಕೆ ಬೆಂಕಿ ಹಚ್ಚಲು ದುಷ್ಕಮರ್ಿಗಳು ವಿಫಲಯತ್ನ ನಡೆಸಿದ್ದು ಪೊಲೀಸರು ಸಕಾಲಿಕ ಕಾಯರ್ಾಚರಣೆಯಿಂದ ಅನಾಹುತ ತಪ್ಪಿಸಿದ್ದಾರೆ. ಅಲ್ಲದೆ ಅಡ್ಡೂರು, ಪೊಳಲಿ ದ್ವಾರ, ಗುರುಪುರದಲ್ಲಿ ಟೈರ್ಗೆ ಬೆಂಕಿ ಹಚ್ಚಲಾಗಿದೆ. ಅಂಗಡಿ-ಮುಂಗಟ್ಟುಗಳು ಶಟರ್ ಎಳೆದುಕೊಂಡಿದ್ದು ಅಘೋಷಿತ ಕಫ್ಯರ್ೂ ವಾತಾವರಣ ನಿಮರ್ಾಣಗೊಂಡಿತ್ತು. ಸ್ಥಳದಲ್ಲಿ ಪೊಲೀಸರು, ಕೆಎಸ್ಆರ್ಪಿ ತುಕಡಿ ಬಂದೋಬಸ್ತ್ ನಡೆಸುತ್ತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಸೆಕ್ಷನ್ 144 ಜಾರಿ
ಗುರುಪರ ಫಿಕರ್್ ವ್ಯಾಪ್ತಿಯ ಉಳಾಯಿಬೆಟ್ಟು ಹಾಗೂ ಸುತ್ತಲ ಒಂದು ಕಿಮೀ ವ್ಯಾಪ್ತಿಯಲ್ಲಿ ಸಿರ್ಪಿಸಿ ಸೆಕ್ಷನ್ 114 ಅನ್ವಯ ನಿಷೇಧಾಜ್ಞೆಗೊಳಿಸಿ ಪೊಲೀಸ್ ಆಯುಕ್ತ ಆರ್ ಹಿತೇಂದ್ರ ಆದೇಶ ಹೊರಡಿಸಿದ್ದರು. . ಯಾವುದೇ ಅಹಿತಕರ ಘಟನೆ ನಡೆಯದಂತೆ 300ಕ್ಕೂ ಅಧಿಕ ಪೊಲೀಸರು ಸಿಬ್ಬಂದಿ 7 ತುಕಡಿ ಹಾಗೂ ಕೆಎಸ್ಆರ್ಪಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಗುರುಪುರದ ಪರಾರಿಯಲ್ಲಿ ಕಲ್ಲುತೂರಾಟ ಹಾಗೂ ಸುಂಕದಕಟ್ಟೆಯಲ್ಲಿ ನಡೆದ ಘರ್ಷಣೆಯ ಬಳಿಕ ಇನ್ನಷ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಬಜ್ಪೆ, ಎಡಪದವು, ಅಡ್ಡೂರು, ಗುರುಪುರ ಕೈಕಂಬ, ಗಂಜಿಮಠ ಮುಂತಾದ ಪ್ರದೇಶದಲ್ಲಿ ಜನರು ಮನೆಯಿಂದ ಹೊರಬರಲು ಹೆದರಿದ್ದಾರೆ. ಅಂಗಡಿ, ಮುಂಗಟ್ಟುಗಳು, ಹೋಟೆಲ್. ಶಾಲಾ ಕಾಲೇಜ್, ಸಂಪೂರ್ಣವಾಗಿ ಬಂದ್ ಆಗಿತ್ತು. ಬ್ಯಾಂಕ್ಗಳು ಬಾಗಿಲು ಮುಚ್ಚಿದ್ದವು. ಮೆಡಿಕಲ್ ಒಂದು ಬಿಟ್ಟರೆ ಉಳಿದದೆಲ್ಲವೂ ಬಂದ್ ಆಗಿದ್ದು ಒಟ್ಟಾರೆ ಬಂದ್ ಯಶಸ್ವಿಯಾಗಿದೆ.

By suddi9

Leave a Reply

Your email address will not be published. Required fields are marked *