ಮಂಗಳೂರು: ಟಿಪ್ಪು ಸುಲ್ತಾನ್ ಕಾಲದ ಖಬರಸ್ತಾನ ಭೂಮಿ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಸೀದಿ ಆಡಳಿತ ಮಂಡಳಿಯಿಂದ ಪ್ರತಿಭಟನೆ ಮಾಡಲಾಗಿದೆ. ಇದೇ ವೇಳೆ ಭೂಕಬಳಿಕೆ ಆರೋಪ ಹೊತ್ತ ಮಹಿಳೆ ಹಾಗೂ ಕುಟುಂಬದಿಂದ ರಂಪಾಟ ಮಾಡಲಾಗಿದ್ದು, ದೊಣ್ಣೆಯಿಂದ ದಾಳಿ ನಡೆಸಿ ಪ್ರತಿಭಟನಾಕಾರನ ಶರ್ಟ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿ ಘಟನೆ ನಡೆದಿದೆ.ಪ್ರಕರಣದ ಬಗ್ಗೆ ಅಹ್ಸನುಲ್ ಮಸೀದಿ ಆಡಳಿತ ಮಾತನಾಡಿದ್ದು, ಹಲವು ವರ್ಷಗಳಿಂದ ಮಸೀದಿ ಪಕ್ಕದ 30 ಸೆಂಟ್ಸ್ ಜಾಗ ಖಬರಸ್ತಾನ ಆಗಿತ್ತು. ನೂರಾರು ವರ್ಷಗಳಿಂದ ಪೂರ್ವಜರ ಮೃತದೇಹ ದಫನ ಮಾಡಲಾಗಿದೆ. ನೂರಾರು ಮುಸ್ಲಿಂ ಕುಟುಂಬಗಳ ಶವ ಧಪನ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅದು ದಫನ ಭೂಮಿ ಅಲ್ಲ, ನಮ್ಮ ಖಾಸಗಿ ಜಾಗವೆಂದು ಉಸ್ಮಾನ್ ಕುಟುಂಬ ಆರೋಪಿಸುತ್ತಿದೆ.

By suddi9

Leave a Reply

Your email address will not be published. Required fields are marked *