ಕೈಕಂಬ: ಪರಾರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಜೊತೆ ಡಿಎಸ್ಪಿ ಜಗದೀಶ್ ಅನುಚಿತವಗಿ ವರ್ತಿಸಿದ್ದು ಈ ಘಟನೆಯ ಬಗ್ಗೆ ಸ್ವತಃ ಬೇಸರಗೊಂಡ ಜಿಲ್ಲಾ ಕಮೀಷನರ್ ಆರ್. ಹಿತೇಂದ್ರ ಸ್ವಾಮೀಜಿಯವರ ಕ್ಷಮೆ ಕೇಳಿದ ಘಟನೆ ನಡೆದಿದೆ.

IMG-20141208-WA0039
ಘಟನೆಯ ವಿವರ: ಪರಾರಿಯಲ್ಲಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆದಿತ್ತು. ಸ್ವಾಮೀಜಿ ಭಾಷಣ ಮಾಡಿದ ನಂತರ ಪ್ರತಿಭಟನಾನಿರತರನ್ನು ಕುಳಿತುಕೊಳ್ಳಲು ಹೇಳಿದ್ದರು. ಈ ವೇಳೆ ಸ್ವಾಮೀಜಿಯ ಬಳಿಗೆ ಬಂದ ಡಿಎಸ್ಪಿ ಜಗದೀಶ್ ಸ್ವಾಮೀಜಿಯವರಲ್ಲಿ ಸ್ಥಳದಿಂದ ತೆರಳುವಂತೆ ಹೇಳಿದ್ದಲ್ಲದೆ, ಸ್ವಾಮೀಜಿಯವ ಮೇಲೆ ಕೈ ಹಾಕಲು ಬಂದಿದ್ದಾರೆ. ಈ ಬಗ್ಗೆ ಆಕ್ಷೇಪಿಸಿದ ಸ್ವಾಮೀಜಿ ಬಗ್ಗೆ ನಮ್ಮಲ್ಲಿ ಲಾ ಆಂಡ್ ಆರ್ಡರ್ ಇದೆ ಈ ಬಗ್ಗೆ ಪ್ರಶ್ನಿಸುವುದು ಬೇಡ ಎಂದು ಹೇಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ಇದರಿಂದ ತಾಳ್ಮೆಯ ಕಟ್ಟೆಯೊಡೆದ ಜನತೆ ಕಲ್ಲು ತೂರಾಟದಂತಹಾ ಘಟನೆ ನಡೆಯಲು ಕಾರಣವಾಯಿತು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಕಮೀಷನರ್ ಹಿತೇಂದ್ರ ಸ್ವಾಮೀಜಿಯವರಲ್ಲಿ ಕ್ಷಮೆ ಕೇಳಲು ಬಂದಿದ್ದು, ಇಂಥಾ ಘಟನೆ ಮುಂದೆದೂ ನಡೆಯಲು ಸಾಧ್ಯವಿಲ್ಲ. ನಮ್ಮಿಂದ ತಪ್ಪಾಗಿದೆ. ಅದಕ್ಕಾಗಿ ಪಶ್ಚಾತಾಪವಾಗಿದೆ ಎಂದು ಸ್ವಾಮೀಜಿಯವರಲ್ಲಿ ಕ್ಷಮೆ ಕೇಳಿದ್ದು, ಇದರಿಂದಾಗಿ ಸ್ವಾಮೀಜಿ ಡಿಎಸ್ಪಿ ಜಗದೀಶ್ ಅವರನ್ನು ಕ್ಷಮಿಸಿರುವುದಾಗಿ ಹೇಳಿದ್ದು, ಈ ಘಟನೆಯನ್ನು ಅಲ್ಲಿಗೇ ಬಿಟ್ಟಿದ್ದೇನೆ, ಆದರೆ ಉಳಾಯಿಬೆಟ್ಟು ತಪ್ಪಿತಸ್ಥರ ವಿರುದ್ಧ ಅಗ್ತಯ ಕ್ರಮ ಕೈಗೊಳ್ಲಬೇಕೆಂದು ಆಗ್ರಹಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *