ಬಂಟ್ವಾಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ವತಿಯಿಂದ ತಾಲೂಕಿನ ವಿವಿಧ ನಗರಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿಯ ಪ್ರಯುಕ್ತ  “ಸಾಮಾಜಿಕ ಸಾಮರಸ್ಯ ದಿನವನ್ನು ಆಚರಿಸಲಾಯಿತು ಎಬಿವಿಪಿ ಬಂಟ್ವಾಳ ನಗರ ತಂಡದ ಪ್ರಮುಖರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು ಮತ್ತು ಸಿದ್ಧಕಟ್ಟೆ ನಗರವತಿಯಿಂದಲು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಾರ್ಪಣೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ತಾಲೂಕು ಸಹ ಸಂಚಾಲಕ್ ಮಹೇಶ್, ಬಂಟ್ವಾಳ ನಗರ ಕಾರ್ಯದರ್ಶಿ ಗೌತಮ್, ಸಿದ್ಧಕಟ್ಟೆ ನಗರ ಕಾರ್ಯದರ್ಶಿ ರಂಜಿತ್ , ಶ್ರೇಯಸ್, ಲಿಖಿತ್,ಅಕ್ಷಿತ್, ಗುರುರಾಜ್, ವಿಘ್ನೇಶ್, ಮನೀಶ್, ಹರ್ಷಿತ್, ಆದಿತ್ಯ ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *