ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಪಂಚಮಿ ಷಷ್ಟಿಯ ಪ್ರಯುಕ್ತ ಶುಕ್ರವಾರ ಶ್ರೀದೇವರಿಗೆ ವಿಶೇಷ ಪೂಜೆ ನೆರವೇರಿತು.

ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶ್ರೀ ಶಾಸ್ತಾರ ದೇವರಿಗೆ ವಿಶೇಷ ಪೂಜೆ,  ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ನಾಗತಂಬಿಲ, ಗಣಪತಿ ಹೋಮ, ಶೀ ಸುಬ್ರಹ್ಮಣ್ಯ ದೇವರಿಗೆ ಫಲಪಂಚಾಮೃತ, ಅಭಿಷೇಕ, ಪವಮಾನರಾತ್ರಿ ರಂಗ ಪೂಜೆ  ಸಹಿತ ವೈಧಿಕ ವಿಧಾನಗಳು‌ ನಡೆಯಿತು.

 ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿತ್ತಾಯ,ಬಂಟ್ವಾಳ ಮೆಸ್ಕಾಂ  ಕಾರ್ಯ ನಿರ್ವಾಹಕ ಅಭಿಯಂತರ ನಾರಾಯಣ ಭಟ್ ,ಮಾಜಿ ಶಾಸಕ ಕೆ ಪದ್ಮನಾಭ ಕೊಟ್ಟಾರಿ, ಎಂ.ಕೆ. ಶಿವ,ಹರಿಪ್ರಸಾದ್ ಭಂಡಾರಿ, ಶ್ರೀನಿವಾಸ್ ನಾಯಕ್, ರಾಜು ಪೂಜಾರಿ, ಚಿತ್ರ ಎಸ್. ರೈ ಮೊದಲಾದವರು ಉಪಸ್ಥಿತರಿದ್ದರು 

By suddi9

Leave a Reply

Your email address will not be published. Required fields are marked *