ಬಂಟ್ವಾಳ :ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಶಂಭೂರು  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನವಂಬರ್ 19 ರಂದು ನಡೆಯಲಿರುವ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದು ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಹೇಮಚಂದ್ರ ಭಂಡಾರದಮನೆ ಅವರು ತಿಳಿಸಿದ್ದಾರೆ.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ಗೌರವಾಧ್ಯಕ್ಷರಾಗಿ ಆನಂದ ಎ. ಶಂಭೂರು, ಕಾರ್ಯಾಧ್ಯಕ್ಷರಾಗಿ ಹೇಮಚಂದ್ರ ಭಂಡಾರದ ಮನೆ, ಉಪಾಧ್ಯಕ್ಷರಾಗಿ ರಾಜೇಶ್ ಶಾಂತಿಲ ಮತ್ತು ಹೆನ್ರಿ ಬುಕೆಲ್ಲೊ,  ಪ್ರಧಾನ ಕಾರ್ಯದರ್ಶಿಯಾಗಿ  ಜಯರಾಮ ಡಿ. ಪಡ್ರೆ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಅಡೆಪಿಲ ಅವರು ಆಯ್ಕೆಯಾಗಿದ್ದಾರೆ.


ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷರಾದ  ವಿಶ್ವನಾಥ ಬಂಟ್ವಾಳ ಮತ್ತು ಪದಾಧಿಕಾರಿಗಳು ಹಾಗೂ ಮಕ್ಕಳ ಕಲಾಲೋಕದ  ಅಧ್ಯಕ್ಷರಾದ  ರಮೇಶ ಎಂ. ಬಾಯಾರು ಮತ್ತು ಪದಾಧಿಕಾರಿಗಳು  ಸಮ್ಮೇಳದ ಯಶಸ್ಸಿಗೆ ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.


ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಆನಂದ ಎ.ಶಂಭೂರು  ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕೋರಿದರು.ಸಮ್ಮೇಳನದಲ್ಲಿ ಸುಮಾರು 750 ವಿದ್ಯಾರ್ಥಿಗಳು ಮತ್ತು ಹಿರಿಯರು,ಪೋಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮ್ಮೇಳನದ ಯಶಸ್ಸಿಗೆ  ಸಹಕಾರಿಯಾಗುವಂತೆ ಉಪಸಮಿತಿಗಳನ್ನೂ ರಚಿಸಲಾಗಿದೆ ಎಂದರು.


  ಶಂಭೂರು ಪರಿಸರದ ಎಲ್ಲ ಸಂಘ ಸಂಸ್ಥೆಗಳ ವಿಶ್ವಾಸವನ್ನು ಪಡೆದು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಕುರಿತು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ವಿವರಿಸಿದರು.
ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ ವಂದಿಸಿದರು. 

By suddi9

Leave a Reply

Your email address will not be published. Required fields are marked *