ಬಂಟ್ವಾಳ: ಅಪರಿಚಿತ ಮಹಿಳೆಯೋರ್ವರ ಮೃತದೇಹ ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಮಂಗಳವಾರ (ಆ. 21) ಪತ್ತೆಯಾಗಿದೆ.ಶಂಭೂರು ಗ್ರಾಮದಲ್ಲಿರುವ ಎ.ಎಮ್.ಆರ್.ಪವರ್ ಲಿ.ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬವರು ನದಿಯಲ್ಲಿ ಮೃತದೇಹ ತೆಲುತ್ತಿರುವುದನ್ನು ನೋಡಿ ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದಾರೆ.

ಡ್ಯಾಂ ನ 6 ನೇ ಗೇಟ್ ನ ಬಳಿ ಸುಮಾರು 40 ರಿಂದ 55 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದ್ದು, ಸುಮಾರು 15 ದಿನಗಳ ಹಿಂದೆ ಮಹಿಳೆ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಆದರೆ ಈ ಅಪರಿಚಿತ ಮಹಿಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿರಬಹುದೇ ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬುದು ಅಸ್ಪಷ್ಟವಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ಅವರು ಭೇಟಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *