ಬಂಟ್ವಾಳ: ಗ್ರಾಮ ಪಂಚಾಯತ್ ಗ್ರಂಥಾಲಯ ಮಾಹಿತಿ ಮತ್ತು ಅರಿವು ಕೇಂದ್ರವು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದ ಸವಲತ್ತುಗಳ ಮಾಹಿತಿಯನ್ನು ತಲುಪಿಸುವಂತ ಕೇಂದ್ರ ವಾಗಬೇಕು ಡಿಜಿಟಲ್ ಕೇಂದ್ರ ಆಗಿರುವುದರಿಂದ  ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಉಪಯುಕ್ತ ಮಾಹಿತಿ ನೀಡುವಂತಾಗಬೇಕೆಂದು  ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ತಿಳಿಸಿದರು.


ಬುಧವಾರ ಬಂಟ್ವಾಳ ತಾ.ಪಂ.ನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ದ.ಕ.ಶಿಕ್ಷಣ ಪೌಂಡೇಶನ್  ಮತ್ತು ಡೆಲ್ ಟೆಕ್ನಾಲಜಿ ಇದರ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕಿನ  7 ಗ್ರಾಮ ಪಂಚಾಯತ್ ನ ಗ್ರಂಥಾಲಯ ಕೇಂದ್ರಗಳಿಗೆ ಕಂಪ್ಯೂಟರ್ ಮತ್ತು     ಸ್ಮಾಟ್೯ ಪೋನ್ ವಿತರಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲಾ ಶಿಕ್ಷಣ ಪೌಂಡೇಶನ್ ನ ಜಿಲ್ಲಾ ಸಂಯೋಜಕರಾದ ಸುಮತಿ ,ತಾ. ಪಂ.ನ ಅಶೋಕ ಕುಮಾರ್ ಬರಿಮಾರ್  ಉಪಸ್ಥಿತರಿದ್ದರು.ಇದೇ ವೇಳೆ ಗ್ರಂಥಾಲಯದ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆಯ ಕುರಿತು ಮಾಹಿತಿ ನೀಡಲಾಯಿತು.
ಶಿಕ್ಷಣ ಪೌಂಡೇಶನ್ ನ ಲವೀಶ್ ಕುಮಾರ್  ಸ್ವಾಗತಿಸಿದರು. ತುಂಬೆ ಗ್ರಂಥಾಲಯ ಮೇಲ್ವಿಚಾರಕರಾದ ಅಶ್ವಿನಿ ವಂದಿಸಿದರು.

By suddi9

Leave a Reply

Your email address will not be published. Required fields are marked *