ಕರಾವಳಿ ಭಾಗದಲ್ಲಿ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಎಲ್ಲಿ ನೋಡಿದ್ರು ನಾಗ ದೇವರಿಗೆ ಹಾಲಿನ ಅಭಿಷೇಕ, ಅನೇಕ ಕಡೆ ಇಂದು ಕುಟುಂಬದ ನಾಗನನ್ನು ಪೂಜಿಸುವ ಕ್ರಮ ಕೂಡ ಇದೆ. ದೇವರಿಗೆ ತಂಬಿಲ ನೀಡಿ, ತಮ್ಮ ನಾಗ ದೋಷವನ್ನು ಪರಿಹಾರಿಸಿ, ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಉಡುಪಿಯಲ್ಲಿ ಒಂದು ವಿಶೇಷವಾದ ಘಟನೆಯೊಂದು ನಡೆದಿದೆ,. ಹೌದು ಜೀವಂತ ಹಾವಿಗೆ ಪೂಜೆ ಮಾಡಿದ್ದಾರೆ.

ನಾಗರ ಪಂಚಮಿ ಪ್ರಯುಕ್ತ ಜೀವಂತ ನಾಗನಿಗೆ ಪೂಜೆ ಮಾಡಿ, ಜಲಾಭೀಷೇಕ, ಸೀಯಾಳ ಅಭಿಷೇಕ ಸಲ್ಲಿಸಿ ಸಲ್ಲಿಸಿದ್ದಾರೆ. ಈ ಘಟನೆ ಕಾಪು ಮಜೂರು ಗೊವರ್ಧನ್ ರಾವ್ ಮನೆಯಲ್ಲಿ ನಾಗ ಬನದಲ್ಲಿ ನಡೆದಿದೆ. ಮೂರು ಜೀವಂತ ನಾಗರ ಹಾವುಗಳಿಗೆ ಪೂಜೆ ಮಾಡಲಾಗಿದೆ. ಕುಟುಂಬ ಸಮೇತರಾಗಿ ಅಭಿಷೇಕ ನಡೆಸಿ, ಆರತಿ ಬೆಳಗಿ ಪೂಜೆ ಮಾಡಲಿದ್ದಾರೆ.

ಗೋವರ್ಧನ ರಾವ್​​​ ಉರಗ ರಕ್ಷಕ ಅವರು ಗಾಯಗೊಂಡ ನಾಗರ ಹಾವುಗಳನ್ನು ಚಿಕಿತ್ಸೆ ನೀಡಿ, ಅವುಗಳು ಜೀವ ರಕ್ಷಣೆ ಮಾಡುತ್ತಾರೆ. ವಾಹನಗಳ‌ ಅಡಿಗೆ ಸಿಲುಕಿದ, ನಾಯಿ ಕಡಿತಕ್ಕೆ ತುತ್ತಾದ, ಪ್ರಾಣಿಗಳಿಂದ ಗಾಯಗೊಂಡ ಹಾವುಗಳ ಆರೈಕೆ ಮಾಡುತ್ತಾರೆ. ಸದ್ಯಕ್ಕೆ ಗೋವರ್ಧನ ರಾವ್ ಆರು ಹಾವುಗಳ ಆರೈಕೆ ಮಾಡುತ್ತಿದ್ದಾರೆ. ಇಂದು ನಾಗರ ಪಂಚಮಿ ವಿಶೇಷವಾಗಿದ್ದು, ಆ ಹಾವುಗಳಿಗೆ ಪೂಜೆ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *