ಬಂಟ್ವಾಳ:ಬಿಳಿಯೂರು ಗ್ರಾಮದ ಪದಬರಿ  ಪೇಜಕೊಡೆ ಒಂಟಿಯಾಗಿ ವಾಸವಿರುವಕಲ್ಯಾಣಿ ಆಚಾರ್ಯ ಅವರ ಮನೆಯ ಸುತ್ತ ಮತ್ತು ಮನೆಯ ಮೇಲೆ ಚಂಡ ಮುಳ್ಳಿನ ಪೊದೆ  ಸುತ್ತುವರಿದು ಮನೆಯ ಒಳಗಡೆ ತುಂಬಿದ್ದ ನೀರನ್ನು ಪೆರ್ನೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಸತತ ಪ್ರಯತ್ನದ ಫಲವಾಗಿ ಮುಳ್ಳಿನ ಪೊದೆಯನ್ನು ತೆರವುಗೊಳಿಸಿ  ಹಿರಿಯ ಜೀವಕ್ಕೆ ವಾಸಿಸಲು ಯೋಗ್ಯವಾಗುವಂತೆ ಮಾಡಿದರು.


ಸ್ಥಳೀಯ ಪಂಚಾಯತ್ ಸದಸ್ಯ ನವೀನ್ ಕುಮಾರ್ ಯವರು ಕಲ್ಯಾಣಿ ಆಚಾರ್ಯ ಅವರ ಮನೆಯ ಸುತ್ತ ಮತ್ತು, ಮನೆಯ ಮೇಲೆ ಚಂಡ ಮುಳ್ಳಿನ ಪೊದೆ ಮನೆಯೊಳಗೆ ನೀರು ತುಂಬಿರುವುದನ್ನು  ಪೆರ್ನೆ ವಲಯ ಶೌರ್ಯ ತಂಡದ ಗಮನಕ್ಕೆ ತಂದಿದ್ದರು.
ಇದಕ್ಕೆ ಸ್ಪಂದಿಸಿದ ಪೆರ್ನೆ ಪಂಚಾಯಿತ್ ಕಾರ್ಯದರ್ಶಿ ರಾಜೇಶ್  ಹಾಗೂ ವಲಯ ಮೇಲ್ವಿಚಾರಕಿಶಾರದಾ,ನವೀನ್ ಕುಮಾರ್ ಪದಬರಿ,ಅಸ್ಮಿತಾ, ಸುರೇಶ್ ಪೂಜಾರಿ,ರಮೇಶ್ ನಾಯ್ಕ್,ಅಶೋಕ್ ದೇವಾಡಿಗ
ಕೇಶವ ಉದ್ವಲೆ, ಪುರುಷೋತ್ತಮ್ ಶೆಟ್ಟಿ,ಜನಾರ್ದನ ಪೆರ್ನೆ,ಗೋಪಾಲ ಪಲ್ಯ,ಕೃಷ್ಣಪ್ಪ ಮಡಿವಾಳ,ಮಮತಾ  ಶ್ರಮದಾನಗೈದರು. 

By suddi9

Leave a Reply

Your email address will not be published. Required fields are marked *