ಮಂಗಳೂರು: ದ.ಕ.ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕಾರಿ ಸಭೆ ದಿನಾಂಕ 01.12.2014 ನೇ ಸೋಮವಾರ ಅಪರಾಹ್ನ ಗಂಟೆ 2.00 ಕ್ಕೆ ಸರಿಯಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಛಾ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಕನರ್ಾಟಕ ರಾಜ್ಯ ಸರಕಾರದ “ಮಹಿಳಾ ಸುರಕ್ಷಾ” ವೈಫಲ್ಯದ ವಿರುದ್ಧ ದಿನಾಂಕ 04.12.2014ನೇ ಗುರುವಾರ ಮಂಗಳೂರಿನಲ್ಲಿ ಬೆಳಿಗ್ಗೆ ಸಮಯ 10.00 ಕ್ಕೆ ಸರಿಯಾಗಿ ನಡೆಯಲಿರುವ “ಜೈಲ್ ಭರೋ” ಕಾರ್ಯಕ್ರಮದ ಮಾಹಿತಿಯನ್ನು ರಾಜ್ಯ ಮಹಿಳಾ ಮೋಚರ್ಾ ಕಾರ್ಯದಶರ್ಿ ಶ್ರೀಮತಿ ಪುಲಸ್ಯ ರೈ ನೀಡಿದರು. ಜೈಲ್ ಭರೋ ಕಾರ್ಯಕ್ರಮ ಯಶಸ್ವಿಗೊಳಿಸುವ ಕಾರ್ಯಕ್ರಮದ ರೂಪುರೇಷೆೆಗಳ ಬಗ್ಗೆ ಜಿಲ್ಲಾ ಪ್ರಧಾನಕಾರ್ಯದಶರ್ಿ ಶ್ರೀ ಸಂಜೀವ ಮಠಂದೂರು ಮಾರ್ಗದರ್ಶನ ನೀಡಿದರು.
ಜೈಲ್ ಭರೋ ಕಾರ್ಯಕ್ರಮದಲ್ಲಿ ಜಿಲ್ಲೆಯ 8 ಮಂಡಲಗಳಿಂದ 2000 ಮಹಿಳೆಯರು ಪಾಲ್ಗೊಂಡು ಯಶಸ್ವಿಗೊಳಿಸಲಿದ್ದಾರೆ.
ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಛಾ ಪ್ರಭಾರಿ ಶ್ರೀಮತಿ ಶಾರದಾ ರೈ, ಜಿಲ್ಲಾ ಮಹಿಳಾ ಮೋರ್ಛಾ ಪ್ರಧಾನ ಕಾರ್ಯದಶರ್ಶಿ ಜಯಂತಿ ನಾಯಕ್, ರಾಜೀವಿ ಉಳ್ಳಾಲ್, ಮಂಡಲಗಳ ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

