ಮೂಡುಬಿದರೆ: ಕರ್ನಾಟಕವೆಂದರೆ ಭೌಗೋಳಿಕ ಪ್ರದೇಶ ಮಾತ್ರವಲ್ಲ ಕರ್ನಾಟಕದ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ಕರ್ನಾಟಕದ ಒಟ್ಟೂ ಮೊತ್ತ. ಕನರ್ಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದು ಮೂಡುಬಿದರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಆದಿತ್ಯ ಭಟ್ ಹೊನ್ನಾವರ ಹೇಳಿದರು
ಗುಜರಾತಿನ ಬರೋಡ ಕರ್ನಾಟಕ ಸಂಘ ತನ್ನ ಸಭಾಭವನದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತದ ಆಶಯಕ್ಕೆ ಎಂದೂ ಧಕ್ಕೆ ತರದೇ ಭಾರತ ಮಾತೆಯ ಮಕ್ಕಳಂತೆ ಬದುಕಿದ ಎರಡು ರಾಜ್ಯಗಳೆಂದರೆ ಕನರ್ಾಟಕ ಮತ್ತು ಗುಜರಾತ್. ಗುಜರಾತಿನ ಗಾಂಧೀಜಿಗೆ ಉತ್ತರ ಕನ್ನಡದ ಹಸ್ಲರದೇವಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಥ್ ನೀಡಿದ್ದನ್ನು ನೆನಪಿಸಿಕೊಳ್ಳಬೇಕು. ಕಳೆದ 80 ವರ್ಷಗಳಿಂದ ಗುಜರಾತಿನಲ್ಲಿ ಕನ್ನಡ ಡಿಂಡಿಮ ನುಡಿಸುತ್ತಿರುವ ಕನರ್ಾಟಕ ಸಂಘ ಉತ್ತಮ ಕೆಲಸವನ್ನು ಮಾಡಿದೆ. ಇಂತಹ ಸಂಘಟನೆಗಳಿಂದಲೇ ಕನರ್ಾಟಕದ ಆಸ್ಮಿತೆ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಬೇಂದ್ರೆಯವರ ಹಾಡನ್ನು ಮೋದಿಯವರ ನಾಡಿನಲ್ಲಿ , ಪುರಂದರ ದಾಸರನ್ನು ಗಾಂಧೀಜಿ ಹುಟ್ಟಿದ ರಾಜ್ಯದಲ್ಲಿ ಪರಿಚಯಿಸಿದ ಕನರ್ಾಟಕ ಸಂಘದ ಚಟುವಟಿಕೆಗಳು ಹೀಗೆ ಮುಂದುವರಿಯಲಿ ಎಂದರು.
ಕನ್ನಡ ರಾಜ್ಯೋತ್ಸವ ನಿಮಿತ್ತ ಗುಜರಾತಿನಲ್ಲಿರುವ ಕನ್ನಡಿಗರಿಗಾಗಿ ರಂಗೋಲಿ ಮತ್ತು ಕನ್ನಡ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಂಘದ ಕಾರ್ಯದರ್ಶಿಗಳಾದ ರಾಘವೇಂದ್ರ ಎನ್ ಆರ್ ಸ್ವಾಗತಿಸಿ, ವಂದಿಸಿದರು. ಅಧ್ಯಕ್ಷ ಕುಮಾರಸ್ವಾಮಿ.ಕೆ.ಆರ್ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯರಾದ ನಾಗರಾಜ, ಎನ್ ಆರ್ ಮುಕ್ತಾಲಿಕ್, ರವೀಂದ್ರ ರಾಜಪುರೋಹಿತ ಉಪಸ್ಥಿತರಿದ್ದರು.


