ಮೂಡುಬಿದರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕನರ್ಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾಗಿರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್ಗೆ ಶನಿವಾರ ಚಾಲನೆ ನೀಡಲಾಯಿತು.
ಯುವಜನ ಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ದೇಶೀಯ ಕ್ರೀಡೆಯಾದ ಬಾಲ್ಬ್ಯಾಡ್ಮಿಂಟನ್ ಪ್ರೋತ್ಸಾಹದ ಕೊರತೆಯಿಂದಾಗಿ ಮಾಯವಾಗುತ್ತಿದೆ. ರಾಜ್ಯ ಸಕರ್ಾರವು ಈ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಾಲ್ಬ್ಯಾಡ್ಮಿಂಟನ್ ಸಾಧಕ ಕ್ರೀಡಾಪಟುಗಳಿಗೆ ಈ ವರ್ಷದಿಂದ ಕ್ರೀಡಾರತ್ನ ಮತ್ತು ಏಕಲವ್ಯ ಪ್ರಶಸ್ತಿಯನ್ನು ನೀಡುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವಾ ಮಾತನಾಡಿ,ಹಿಂದಿನ ಸಕರ್ಾರಗಳು ಬಾಲ್ಬ್ಯಾಡ್ಮಿಂಟನ್ ಕ್ರೀಡೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಈಗ ಈ ಕ್ರೀಡೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸಕರ್ಾರ ಮಾಡುತ್ತಿದೆ. ರಾಜ್ಯದಲ್ಲೇ ಅತೀ ಹೆಚ್ಚು ಕ್ರೀಡಾಪಟುಗಳಿರುವ ಮೂಡುಬಿದರೆಗೆ ಕ್ರೀಡಾ ಇಲಾಖೆಯು ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕನ್ನು ನಿಮರ್ಿಸಿದ್ದು ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಿದೆ. ಇದರ ಮೂಲಕ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಬಾಲ್ಬ್ಯಾಡ್ಮಿಂಟನ್ ಕ್ರೀಡೆಯ ರಾಜ್ಯದ ಪ್ರಮುಖ ಆಟಗಾತರ್ಿ ಆಳ್ವಾಸ್ ವಿದ್ಯಾಥರ್ಿನಿ ಶುೃತಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಬಾಲ್ಬ್ಯಾಡ್ಮಿಂಟನ್ ಸಂಸ್ಥೆಯ ಕೋಶಾಧಿಕಾರಿ ಶಿವಣ್ಣ ಅವರನ್ನು ಗೌರವಿಸಲಾಯಿತು.
ರಾಜ್ಯ ಬಾಲ್ಬ್ಯಾಡ್ಮಿಂಟನ್ ಅಸೋಶಿಯೇಷನ್ನ ಕೋಶಾಧಿಕಾರಿ ಶಿವಣ್ಣ, ಜೊತೆ ಕಾರ್ಯದಶರ್ಿ ಗೌಸ್ ಷರೀಫ್, ಉಪಾಧ್ಯಕ್ಷರಾದ ಬಾಲಕೃಷ್ಣ, ಮಹಾದೇವಪ್ಪ ಉಪಸ್ಥಿತರಿದ್ದರು. ಕ್ರೀಡಾ ಶಿಕ್ಷಕ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
