ಮಂಗಳೂರು: ಜಿಲ್ಲೆಯಲ್ಲಿ ಕಂಬಳಕ್ಕೆ ಮತ್ತೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಕಂಬಳ ಅಭಿಮಾನಿಗಳು ತನ್ನ ಜೋಡು ಕೋಣಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕಂಬಳ ನಿಷೇಧಿಸುವ ಸಲುವಾಗಿ ಪ್ರಾಣಿದಯಾ ಸಂಘದವರು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ಕಂಬಳವನ್ನು ಜಲ್ಲಿಕಟ್ಟು ಪ್ರಕರಣದ ಆಧಾರದಲ್ಲಿ ನಿಷೇಧಕ್ಕೆ ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ ಗೆ ಪ್ರಾಣಿದಯಾ ಸಂಘದವರು ನೀಡಿರುವ ಮನವಿಯಂತೆ ಇಲ್ಲಿ ಕಂಬಳುದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿಲ್ಲ, ಮತ್ತೆ ಹಿಂದಿನಂತೆಯೇ ಕಂಬಳ ನಡೆಯಬೇಕೆಂದು ಆಗ್ರಹಿಸಿ ನೂರಾರು ಕಂಬಳ ಪ್ರಿಯರಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು..
ಪ್ರಾಣಿ ಹಿಂಸೆ ಎಂಬ ಕಾರಣಕ್ಕೆ ಕಂಬಳವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಪ್ರೇಮಿಗಳು ಖಂಡಿಸಿದ್ದರು. ಕಂಬಳ ನಿಷೇಧದ ಹಿನ್ನೆಲೆಯಲ್ಲಿ ಶಿರ್ವದಲ್ಲಿ ನಡೆಯಬೇಕಿದ್ದ ಕಂಬಳವನ್ನು ನಿಲ್ಲಿಸಲಾಗಿತ್ತು. ಇದೀಗ ರಾಜ್ಯ ಸರಕಾರ ಕಂಬಳವನ್ನು ನಡೆಸಲು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಂಬಳ ಪ್ರೇಮಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಿಗ್ಗೆ 11 ಗಂಟೆಯ ವೇಳೆಗೆ `ಕಂಬಳ ಬೇಕು’ ಎಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯಿತು. ಕಂಬಳದಲ್ಲಿ ಕೋಣಗಳೂ ಭಾಗವಹಿಸಿದ್ದ ವಿಶೇಷವಾಗಿತ್ತು.










