(
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಅಭಿವೃದ್ಧಿಗೊಂಡಿಲ್ಲ ಎಂದು ಆರೋಪಿಸಿ ಕಾರ್ಪೊರೇಟರ್ ಆಗಿರುವ ರೂಪಾ ಡಿ. ಬಂಗೇರಾ ಅವರು ಸುದ್ದಿ9ಗೆ ಪತ್ರವನ್ನು ಬರೆದಿದ್ದು ಅದನ್ನು ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ…)
ಮಂಗಳೂರು ಮಹಾನಗರವು ರಾಜ್ಯದಲ್ಲಿ ಅತೀ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ಈ ಮಹಾನಗರದ ಸ್ಥಳೀಯ ಆಡಳಿತ ನಡೆಸುವ ಮಹಾನಗರಪಾಲಿಕೆಗೆ ಆಯುಕ್ತರ ನೇಮಕವಾಗದೆ, ಅಭಿವೃದ್ಧಿ ವಿಷಯದಲ್ಲಿ ಮಂಗಳೂರು ನಗರವು 10 ವರ್ಷಗಳಷ್ಟು ಹಿಂದೆ ಸರಿದಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಈ ಹಿಂದೆ ಎಂದೂ ಆಗದ ರೀತಿಯಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ಹೆಚ್ಚಿನ ಪ್ರಮುಖ ರಸ್ತೆಗಳು ಅಗಲೀಕರಣ, ಕಾಂಕ್ರೀಟೀಕರಣಗೊಂಡು ಅಭಿವೃದ್ಧಿ ಹೊಂದಿವೆ. ನಮ್ಮ ಕಲ್ಪನೆಯ ಸುಂದರ ಮಂಗಳೂರು ನನಸಾಗುವ ಸಮಯದಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಮತ್ತು ಪಾಲಿಕೆಯ ಕಾಂಗ್ರೆಸ್ ಆಡಳಿತವು ಪಾಲಿಕೆಯ ಅಭಿವೃದ್ಧಿ ಪಥವನ್ನು ಯು ಟನರ್್ ರೀತಿಯಲ್ಲಿ ಹಿಮ್ಮುಖವಾಗಿ ಬದಲಾಯಿಸಿದೆ.
ಮೇಯರ್ ಮೀಸಲಾತಿ ವಿಷಯದಲ್ಲಿ ವಿಳಂಬ ಧೋರಣೆಯನ್ನು ತಳೆದ ರಾಜ್ಯ ಸರಕಾರದ ನಿಲುವಿನಿಂದಾಗಿ, ಆಯ್ಕೆಯಾದ ಕಾಪರ್ೊರೇಟರ್ಗಳು 1 ವರ್ಷಗಳ ಕಾಲ ಸುಮ್ಮನೆ ಕಾಲ ಕಳೆಯಬೇಕಾಯಿತು. ಮಂಗಳೂರಿನ ಅಭಿವೃದ್ಧಿಯ ವೇಗಕ್ಕೆ ರಾಜ್ಯ ಸರಕಾರ ನೀಡಿದ ಮೊದಲ ಏಟು ಇದಾಗಿತ್ತು. ನಂತರ ತಡವಾಗಿ ಮೀಸಲಾತಿ ಪ್ರಕಟಗೊಂಡು, ಇನ್ನಾದರೂ ಪಾಲಿಕೆಯ ಆಡಳಿತಕ್ಕೆ ಚುರುಕು ಮುಟ್ಟುತ್ತದೆ ಎನ್ನುವಾಗ ಆಡಳಿತ ಪಕ್ಷದ ನಾಯಕರ ಒಳ ಜಗಳದಿಂದಾಗಿ ಪಾಲಿಕೆಯ ಆಯುಕ್ತರ ನೇಮಕ ತೀವ್ರ ಗೊಂದಲಕ್ಕೀಡಾಯಿತು. ತಮ್ಮ ಪ್ರತಿಷ್ಠೆಗಾಗಿ ಸ್ವಾರ್ಥ ಸಾಧನೆಗಾಗಿ ತಮ್ಮೊಳಗೆ ಕಾಲೆಳೆಯುವ ಜಾಯಮಾನಕ್ಕೆ ಹೆಸರುವಾಸಿಯಾದ ಜಿಲ್ಲಾ ಕಾಂಗ್ರೆಸ್, ಆಯುಕ್ತರ ನೇಮಕದಲ್ಲೂ ಈ ನಡೆಯನ್ನೇ ಅತೀ ಶಿಸ್ತಿನಿಂದ ನಿರ್ವಹಿಸಿದೆ. ಅಪ್ಪ, ಅಮ್ಮನ ಜಗಳದಿಂದ ಕೂಸು ಬಡವಾಯಿತು ಎಂಬ ಮಾತಿನಂತೆ ಕಾಂಗ್ರೆಸ್ಸಿನ ಒಳ ಜಗಳದ ಪರಿಣಾಮವನ್ನು ಮಂಗಳೂರಿನ ಜನತೆ ಅನುಭವಿಸಬೇಕಾಗಿ ಬಂದಿರುವುದು ನಮ್ಮ ದೌಭರ್ಾಗ್ಯವೇ ಸರಿ.
ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ನಂತರ ಯಾವುದೇ ಗಮನ ಸೆಳೆಯುವ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಬಿಜೆಪಿ ಆಡಳಿತವಿದ್ದಾಗ ಪ್ರಗತಿಯಲ್ಲಿದ್ದ ಕಾಮಗಾರಿಗಳು ಅಲ್ಲಲ್ಲಿಗೆ ನಿಂತು ಹೋಗಿದ್ದು, ಅವುಗಳನ್ನು ಪೂತರ್ಿಗೊಳಿಸಿ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಕನಿಷ್ಠ ಯೋಜನೆಯನ್ನು ಪಾಲಿಕೆ ಆಡಳಿತ ಈವರೆಗೂ ಮಾಡಿಲ್ಲ. ಸ್ವಚ್ಚ ಭಾರತ ಆಂದೋಲನಕ್ಕೆ ಪಾಲಿಕೆಯಿಂದ ನೀರಸ ಪ್ರತಿಕ್ರಿಯೆ ಲಭಿಸಿದ್ದು, ಆಂದೋಲನಕ್ಕೆ ಕೈಜೋಡಿಸುವುದು ಬಿಡಿ, ಸಂಗ್ರಹವಾದ ಕಸವನ್ನೂ ಸಹ ಸಮರ್ಪಕವಾಗಿ ವಿಲೆವಾರಿ ಮಾಡುವ ಪ್ರಕ್ರಿಯೆಯು ಸರಿಯಾಗಿ ನಡೆಯುತ್ತಿಲ್ಲ. ಪಾಲಿಕೆಯ ಆಯುಕ್ತರ ಹುದ್ದೆ ಖಾಲಿ ಇರುವುದರಿಂದ ಇಡೀ ಪಾಲಿಕೆಯ ಆಡಳಿತ ಅವ್ಯವಸ್ಥೆಯ ಬೀಡಾಗಿದೆ. ಒಟ್ಟಿನಲ್ಲಿ ಸಾರಥಿಯಿಲ್ಲದ ರಥದಂತೆ ಪಾಲಿಕೆಯ ಆಡಳಿತವು ದಿಕ್ಕುದೆಸೆಯಿಲ್ಲದೆ ನಡೆಯುತ್ತಿದ್ದು, ಅಭಿವೃದ್ಧಿಯ ವಿಷಯದಲ್ಲಿಯೂ, ಅನುದಾನ ಹಂಚಿಕೆಯಲ್ಲಿಯೂ, ಕೇವಲ ರಾಜಕೀಯ ಮಾತ್ರ ರಾರಾಜಿಸುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಇವು ಪ್ರಮುಖ ಅಂಗಗಳು ಇದರಲ್ಲಿ ಒಂದು ಅಂಗದಲ್ಲಿ ನ್ಯೂನತೆ ಕಂಡುಬಂದರೂ ಇದು ನೇರವಾಗಿ ಜನ ಸಾಮಾನ್ಯರ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಮಂಗಳೂರಿನ ಸ್ಥಳೀಯಾಡಳಿತದಲ್ಲಿ ಕಾಯರ್ಾಂಗದ ಮುಖ್ಯಸ್ಥರಾದ ಆಯುಕ್ತರನ್ನು ದೀಘರ್ಾವಧಿಗೆ ಇಲ್ಲದಿರುವಂತೆ ಮಾಡಿರುವ ಕೀತರ್ಿ ರಾಜ್ಯದ ಕಾಂಗ್ರೇಸ್ ಸರಕಾರಕ್ಕೆ ಲಭಿಸುತ್ತದೆ. ಜಿಲ್ಲೆಯವರೇ ಆದ ನಗರಾಭಿವೃದ್ಧಿ ಸಚಿವರು ಆಯುಕ್ತರ ನೇಮಕಾತಿ ಶೀಘ್ರ ಆಗಲಿದೆ ಎಂದಷ್ಟೇ ಹೇಳುತ್ತಾರೆ. ಈ ಶೀಘ್ರ ಅದೆಷ್ಟು ದೀರ್ಘ ಎಂದು ನಗರಾಭಿವೃದ್ಧಿ ಸಚಿವರೇ ವಿವರಣೆ ನೀಡಬೇಕಾಗಿದೆ. ಇನ್ನು ಮುಖ್ಯಮಂತ್ರಿಗಳು ಆಯುಕ್ತರ ನೇಮಕಾತಿ ವಿಷಯದಲ್ಲಿ ನಾವು ಮಾತಿಗೆ ತಪ್ಪಿದ್ದೇವೆ ಎಂದು ಸ್ವತಃ ಒಪ್ಪಿಕೊಂಡು, ತಮ್ಮ ವೈಫಲ್ಯವನ್ನು ಇಚ್ಛಾಶಕ್ತಿಯ ಕೊರತೆಯನ್ನು ಪ್ರದಶರ್ಿಸಿದ್ದಾರೆ. ಇದೇ ಮುಖ್ಯಮಂತ್ರಿಗಳು ಇತ್ತೀಚೆಗೆ ಮಡಿಕೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕೆಲಸದ ವಿಳಂಬವೂ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿರುತ್ತಾರೆ. ಹಾಗಾದರೆ ಆಯುಕ್ತರ ನೇಮಕದಲ್ಲಾದ ವಿಳಂಬ ಯಾವ ರೀತಿಯ, ಯಾರಿಂದ ಆದ ಭ್ರಷ್ಟಾಚಾರ ಎಂದು ಮುಖ್ಯಮಂತ್ರಿಗಳು ವ್ಯಾಖ್ಯಾನ ನೀಡಬೇಕಾದ ಅಗತ್ಯ ಇದೆ.
ಇನ್ನು ಜಿಲ್ಲೆಯಲ್ಲಿ ಏನೇ ಘಟನೆ ನಡೆದರೂ ಅದಕ್ಕೆ ಸ್ಪಂದಿಸಿ ತಮ್ಮ ಹೇಳಿಕೆ ನೀಡುವ ಕಾಂಗ್ರೇಸಿನ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರು, ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದವರು ವಿವಿಧ ಆಶ್ವಾಸನೆ ನೀಡಿ ಮಂಗಳೂರಿನ ಜನತೆಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಭರವಸೆ ನೀಡಿದ ಮಾನ್ಯ ಪೂಜಾರಿಯವರು ದ್ರೌಪದಿ ವಸ್ತ್ರಾಪಹರಣ ಪ್ರಸಂಗದಲ್ಲಿ ಭೀಷ್ಮ ಮೌನಿಯಾದಂತೆ ಈಗ ಆಯುಕ್ತರ ನೇಮಕಾತಿ ವಿಷಯದಲ್ಲಿ ಮೌನಕ್ಕೆ ಶರಣಾಗುವ ಅನಿವಾರ್ಯತೆ ಒದಗಿ ಬಂದಿದೆಯೇ?
ಕೇಂದ್ರ ಸರಕಾರವು ಮಂಗಳೂರನ್ನು ಸ್ಮಾಟರ್್ ಸಿಟಿ ಮಾಡಲು ಹೊರಟಿದೆ. ಮಂಗಳೂರಿಗೆ ವಿಶ್ವ ದಜರ್ೆಯ ರೈಲು ನಿಲ್ದಾಣ ಒದಗಿಸಲು ಯೋಜನೆ ರೂಪಿಸುತ್ತಿದೆ. ಆದರೆ ನಮ್ಮ ರಾಜ್ಯ ಸರಕಾರಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಕಾಂಗ್ರೆಸಿಗರಿಗೆ ಜಿಲ್ಲೆಯ ಕನಿಷ್ಠ ಒಂದು ಆಯುಕ್ತರನ್ನು ಮಂಗಳೂರಿನ ಪಾಲಿಕೆಗೆ ನೇಮಕ ಮಾಡುವ ಇಚ್ಛಾ ಶಕ್ತಿ ಇಲ್ಲದೆ ಹೋದದ್ದು ಮಂಗಳೂರಿನ ಅಭಿವೃದ್ಧಿಯ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಮಂಗಳೂರು ಮಹಾನಗರಪಾಲಿಕೆಗೆ ಆಯುಕ್ತರನ್ನು ನೇಮಕ ಮಾಡಬೇಕು ಇಲ್ಲದಿದ್ದಲ್ಲಿ ಮಂಗಳೂರಿನ ಅಭಿವೃದ್ಧಿಯನ್ನು ಬಯಸುವ ಸಮಾನ ಮನಸ್ಕರೆಲ್ಲ ಸೇರಿ ಮುಂದೆ ತೀವ್ರ ತರಹದ ಹೋರಾಟಗಳನ್ನು ಮಾಡುವುದು ಅನಿವಾರ್ಯವಾದೀತು ಎಂದು ರಾಜ್ಯ ಸರಕಾರಕ್ಕೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ.
ರೂಪಾ ಡಿ.ಬಂಗೇರಾ
ಕಾಪರ್ೊರೇಟರ್
ಕದ್ರಿ ಉತ್ತರ ಹಾಗೂ
ಪ್ರ.ಕಾರ್ಯದಶರ್ಿ, ಬಿಜೆಪಿ ಮಹಿಳಾ ಮೋಚರ್ಾ ದ.ಕ.ಜಿಲ್ಲೆ
