ಮೂಡುಬಿದರೆ: ಅಲಂಗಾರಿನ ವಾಡರ್್ 3ರ ಅಶ್ರಯ ಕಾಲನಿಯ ಕಾಮರ್ಿಕರಿಬ್ಬರಲ್ಲಿ ಶುಕ್ರವಾರ ಶಂಕಿತ ಡೆಂಗ್ಯೂ ಜ್ವರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕಾಲನಿಯ ಕಮಲ(60)ಮತ್ತು ಜಯಂತಿ(30)ಅವರಿಗೆ ಜ್ವರ ಕಾಣಿಸಿಕೊಂಡಾಗ ಅಲಂಗಾರಿನ ಖಾಸಗಿ ಕ್ಲಿನಿಕ್ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.ಅನುಮಾನಗೊಂಡ ವೈದ್ಯರು ಹೆಚ್ಚಿನ ಚಿಇಕಿತ್ಸೆಗೆ ಮೂಡುಬಿದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳಿಸಿಕೊಟ್ಟರು. ಅಲ್ಲಿ ವೈದ್ಯರು ರೋಗಿಗಗಳ ರಕ್ತ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರದ ಪಾಸಿಟಿವ್ ಲಕ್ಷಣಗಳು ಗೋಚರಿಸಿದ್ದು ಇದನ್ನು ಖಚಿತಪಡಿಸಲು ರಕ್ತದ ಮಾದರಿಯನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಲಾ ತಿಳಿಸಿದ್ದಾರೆ.
ಘಟನೆಯ ನಂತರ ಆರೋಗ್ಯಕೇಂದ್ರದ ಸಿಬಂದಿಗಳು ಸ್ಥಳಕ್ಕೆ ತೆರಳಿ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದ್ದು ಕಾಲನಿಯ ಇತರ ಕೆಲವರ ರಕ್ತದ ಮಾದರಿಯನ್ನು ಪರೀಕ್ಷೆಗೆ ತಂದಿರುತ್ತಾರೆಂದು ತಿಳಿದುಬಂದಿದೆ. ಪುರಸಭೆ ಸಿಬಂದಿಗಳು ಸ್ಥಳಕ್ಕೆ ತೆರಳಿ ಕಾಲನಿ ಪರಿಸರದಲ್ಲಿ ಸೊಳ್ಳೆ ನಿಯಂತ್ರಕ ಔಷಧಿ ಸಿಂಪಡಿಸಿರುತ್ತಾರೆ. ಶಂಕಿತ ಡೆಂಗ್ಯೂ ರೋಗಿಗಳು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶ್ರಯ ಕಾಲನಿಯ ಅಲ್ಲಲ್ಲಿ ನೀರು ನಿಂತು ಕಲುಷಿತ ವಾತಾವರಣ ನಿಮರ್ಾಣವಾಗಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.
