ಮೂಡುಬಿದರೆ: ಮಧ್ಯಪ್ರದೇಶದ ಶಿಹೋರ್ನಲ್ಲಿ ನ.15 ಮತ್ತು 16 ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಮೂಡುಬಿದರೆಯ ಶೊರಿನ್ ರಿಯೂ ಕರಾಟೆ ತಂಡವು 7 ಚಿನ್ನ, 2 ಬೆಳ್ಳಿ ಪದಕ ಪಡೆದು ಉತ್ತಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಕರಾಟೆ ಚಾಂಪಿಯನ್ಶಿಪ್ನಲ್ಲಿ ಸಾಧನೆ ಮಾಡಿದ ಶೊರಿನ್ ರಿಯೂ ಕರಾಟೆ ತಂಡ
Red Curtain
ಆಸಿಫ್ ಅಹ್ಮದ್ 2 ಚಿನ್ನ, 1 ಬೆಳ್ಳಿ ಪದಕ, ಅಮೃತ್ ಬಿ.ವಿ. 3 ಚಿನ್ನದ ಪದಕ, ಸೈಯದ್ ಸಲಮತ್ ಅಜಿಲನ್ 1 ಚಿನ್ನ, 1 ಬೆಳ್ಳಿ ಪದಕ, ಸಂದೇಶ್ ನಾಯಕ್ 1 ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರೆಲ್ಲರೂ ಮೂಡುಬಿದಿರೆ ಶೋರಿನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ನದೀಂ ಹಾಗೂ ಸಹಾಯಕ ಶಿಕ್ಷಕ ಸರ್ಫರಾಜ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಆಸಿಫ್ ಅಹ್ಮದ್ 25 ಕೆ.ಜಿ. ಕುಮಿಟೆಯಲ್ಲಿ ಚಿನ್ನದ ಪದಕ, 12 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ, 12 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ.
ಅಮೃತ್ ಬಿ.ವಿ. 50 ಕೆ.ಜಿ. ಕುಮಿಟೆಯಲ್ಲಿ ಚಿನ್ನದ ಪದಕ, 19 ರಿಂದ 20 ವರ್ಷ ವಯೋಮಿತಿಯ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ, 19 ರಿಂದ 20 ವರ್ಷ ವಯೋಮಿತಿಯ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ.
ಸಂದೇಶ ನಾಯಕ್ 40. ಕೆ.ಜಿ. ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.=

By suddi9

Leave a Reply

Your email address will not be published. Required fields are marked *