ಬಂಟ್ವಾಳ:ಕಳೆದ ೧೦ ವರ್ಷಗಳಿಂದ ವಿವಿಧ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಇಲ್ಲಿನ ಮಾನವ ಬಂದುತ್ವ ವೇದಿಕೆ ವತಿಯಿಂದ ಇದೇ ೨೪ರಂದು ಬೆಳಿಗ್ಗೆ ಗಂಟೆ ೯.೩೦ಕ್ಕೆ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ‘ಸಂವಿಧಾನ ಅರಿವಿನ ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಈಗಾಗಲೇ ಬುದ್ಧ, ಬಸವ, ಕನಕ ಕಬೀರ್, ಅಂಬೇಡ್ಕರ್, ಗಾಂದಿ,ü ಕುವೆಂಪು ಮತ್ತಿತರ ದಾರ್ಶನಿಕರ ವಿಚಾರಧಾರೆ ಮತ್ತು ಸಂದೇಶಗಳ ಬಗ್ಗೆ ಯುವ ಜನತೆಗೆ ಅರಿವು ಮೂಡಿಸುವ ಪ್ರಯತ್ನ ಸಂಘಟನೆ ಮಾಡುತ್ತಿದೆ.
ಈ ‘ಸಂವಿಧಾನ ಅರಿವಿನ ಹಬ್ಬ’ ಕಾರ್ಯಕ್ರಮವನ್ನು ಚಿಂತಕ ಡಾ.ಸಿದ್ದನಗೌಡ ಪಾಟೀಲ ಉದ್ಘಾಟಿಸಲಿದ್ದು, ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ಲೇಖಕ ಕೆ.ಆರ್. ವಿದ್ಯಾಧರ್, ಶಿಕ್ಷಣ ತಜ್ಞ ಲೇಖಕ ಶ್ರೀಪಾದ ಭಟ್, ವಕೀಲ ದಿನೇಶ್ ಹೆಗಡೆ ಉಳೆಪ್ಪಾಡಿ, ಚಿಂತಕ ಎಲ್.ಎನ್.ಮುಕುಂದರಾಜ್, ಶಿಕ್ಷಣ ತಜ್ಙೆ ಫರ್ಜಾನಾ ಆಶ್ರಫ್, ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮತ್ತಿತರ ಗಭ್ಯರು ಭಾಗವಹಿಸುವರು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ಸೋರ್ಣಾಡು ಮತ್ತು ಸಮಿತಿ ಸಂಚಾಲಕ ಕೇಶವ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
