ಬಂಟ್ವಾಳ: ಲಯನ್ಸ್ ಕ್ಲಬ್ ವಿವಿಧ ಸಮಾಜ ಸೇವಾ ಚಟುವಟಿಕೆ ಜೊತೆಗೆ ಇಲ್ಲಿನ ಪ್ರಯಾಣಿಕರ ಬಹು ಕಾಲದ ಬೇಡಿಕೆಗೆ ಸ್ಪಂದಿಸುವ ಮೂಲಕ ಜನರಿಗೆ ಹತ್ತಿರವಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಎಸ್. ಸಂಜಿತ್ ಶೆಟ್ಟಿ ಹೇಳಿದ್ದಾರೆ.ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ ಲಯನ್ಸ್ ಕ್ಲಬ್ ವತಿಯಿಂದ ಪ್ರಯಾಣಿಕರಿಗಾಗಿ ನಿಮಾಣಗೊಂಡ ನೂತನ ಬಸ್ ತಂಗುದಾಣವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಮುಖರಾದ ಪ್ರಗತಿ ಸಂಜಿತ್ ಶೆಟ್ಟಿ, ವಸಂತ್ ಕುಮಾರ್ ಶೆಟ್ಟಿ, ಶ್ರೀನಿವಾಸ ಪೂಜಾರಿ ಮೇಲ್ಕಾರ್, ಧೀರಜ್ ಹೆಬ್ರಿ, ಲಕ್ಷ್ಮಣ್ ಕುಲಾಲ್ ಅಗ್ರಬೈಲ್, ರಮಾನಂದ ನೂಜಿಪ್ಪಾಡಿ, ಜಗದೀಶ ಎಡಪಡಿತ್ತಾಯ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ, ಕಾರ್ಯದರ್ಶಿ ಬಿ.ಶಿವಾನಂದ ಬಾಳಿಗಾ, ಕೋಶಾಧಿಕಾರಿ ಜಗದೀಶ್ ಬಿ.ಎಸ್., ಸೇವಾ ಟ್ರಸ್ಟ್ ಕೋಶಾಧಿಕಾರಿ ಸುನೀಲ್ ಬಿ., ಲಯನ್ಸ್ ಮಾಜಿ ವಲಯಾಧ್ಯಕ್ಷ ಕೃಷ್ಣಶ್ಯಾಮ್, ಪೂರ್ವಾ ಧ್ಯಕ್ಷ ಡಾ. ವಸಂತ ಬಾಳಿಗಾ, ಸುಧಾಕರ ಆಚಾರ್ಯ, ಜಯಂತ್ ಶೆಟ್ಟಿ, ಮಧ್ವರಾಜ್ ಕಲ್ಮಾಡಿ, ತಪೋಧನ ಶೆಟ್ಟಿ, ವಾಲ್ಟರ್ ನೊರೊನ್ಹ, ಮಾಧವ ಮಾರ್ಲ, ಜಯಚಂದ್ರ ಆಚಾರ್ಯ ಸರಪಾಡಿ ಮತ್ತಿತರರು ಇದ್ದರು.