ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. 2014-2017ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯಕ್ ಹಾಗೂ ಕೋಶಾಧಿ ಕಾರಿಯಾಗಿ ಇಬ್ರಾಹಿಂ ಅಡ್ಕಸ್ಥಳ ಆಯ್ಕೆಯಾದರು. ಅವಿರೋಧವಾಗಿ ಆಯ್ಕೆಯಾದ ಇತರ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ. ಉಪಾಧ್ಯ ಕ್ಷರುಗಳಾಗಿ ಸುಕೇಶ್ ಕುಮಾರ್, ಸುಧಾಕರ ಎರ್ಮಾಳ್, ಕೆ.ವಿಲ್ಫ್ರೆಡ್ ಡಿ’ಸೋಜಾ, ಕಾರ್ಯದರ್ಶಿಯಾಗಿ ವೆಂಕಟೇಶ್ ಬಂಟ್ವಾಳ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ರವೀಂದ್ರ ಶೆಟ್ಟಿ, ರಾಮಕೃಷ್ಣ ಆರ್, ಕಿರಣ್ ಯು. ಸಿರ್ಸಿ ಕರ್, ಹಿಲರಿ ಕ್ರಾಸ್ತ, ವೇಣುವಿನೋದ್ ಕೆ.ಎಸ್, ಅನ್ಸಾರ್ ಇನೋಳಿ, ಆಗ್ನೆಲ್ ರೋಡ್ರಿಗಸ್, ಸುರೇಶ್ ಡಿ. ಪಳ್ಳಿ, ನರೇಶ್ ಕುಮಾರ್ ಸಸಿಹಿತ್ಲು, ನರೇಂದ್ರ ಕೆರೆಕಾಡು, ಜಿತೇಂದ್ರ ಕುಂದೇಶ್ವರ, ಶರತ್ ಶೆಟ್ಟಿ , ಆರ್. ಎ. ಲೋಹಾನಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾ ರಿಯಾಗಿ ರವಿ ಪ್ರಸಾದ್ ಕಮಿಲ ಇವರು ಕಾರ್ಯ ನಿರ್ವಹಿಸಿದ್ದಾರೆ.

ಜಗನ್ನಾಥ ಶೆಟ್ಟಿ ಬಾಳ
ಜಗನ್ನಾಥ ಶೆಟ್ಟಿ ಬಾಳ

 

Srinivas Nayak

 

 

vasanth ermal

By Suddi9

Leave a Reply

Your email address will not be published. Required fields are marked *