ಮಂಗಳೂರು:  ಸೈಬರ್‍ಗೆ ತೆರಳಿದ್ದ ಎನ್ ಆರ್ ಐ ವಿದ್ಯಾರ್ಥಿನಿ ಯನ್ನು ಅಲ್ಲಿನ ಸಿಬ್ಬಂದಿ  ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ದೇರಳಕಟ್ಟೆಯಲ್ಲಿ  ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದಾರೆ. ಮದನಿನಗರ ನಿವಾಸಿ  ಅಬೂಬಕರ್ ಸಿದ್ದೀಕ್ (33) ಬಂಧಿತ ಆರೋಪಿ.

abubakkar siddik

ದೇರಳಕಟ್ಟೆ ಖಾಸಗಿ ಕಾಲೇಜೊಂದರ ಬಿಎಸ್ಸಿ ನರ್ಸಿಂಗ್ ವಿಭಾಗದ ಕೇರಳ ಮೂಲದ ಸದ್ಯ ಅಮೆರಿಕಾದಲ್ಲಿ ವಾಸಿಸುತ್ತಿರುವ  ಎನ್ ಆರ್‍ಐ ವಿದ್ಯಾರ್ಥಿನಿ ಅತ್ಯಾಚಾರ ಯತ್ನಕ್ಕೆ ಒಳಗಾದಾಕೆ. ದೇರಳಕಟ್ಟೆ ಪ್ರೆಸ್ಟೀಜ್ ವ್ಯೂ ಅಪಾರ್ಟ್‍ಮೆಂಟಿನಲ್ಲಿದ್ದ ಈಕೆ ಅದೇ ಕಟ್ಟಡದ ನೆಲಮಹಡಿ ಯಲ್ಲಿರುವ `ಸೈಬರ್ ಕೆಫೆ’ ಸೈಬರ್ ಸೆಂಟರಿಗೆ ಪ್ರಾಜೆಕ್ಟ್ ವರ್ಕ್ ಕೆಲಸದ ನಿಮಿತ್ತ ನ.18 ರಂದು ಸಂಜೆ ವೇಳೆ ಬಂದಿದ್ದಳು. ಅಲ್ಲಿ ಕಂಪ್ಯೂಟರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸೈಬರನ್ನು  ನೋಡಿಕೊಳ್ಳುತ್ತಿರುವ ಸಿಬ್ಬಂದಿ ಅಬೂಬಕರ್ ಸಿದ್ದೀಕ್  ವಿದ್ಯಾರ್ಥಿನಿ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಕೈ ಹಾಕಿದ್ದನು. ಇದರಿಂದ ಬೆದರಿದ ವಿದ್ಯಾರ್ಥಿನಿ ಕಿರುಚಲು ಆರಂಭಿಸಿ ದಾಗ ಆತ ಜೀವಬೆದರಿಕೆಯೊಡ್ಡಿದ್ದನು. ನಂತರ ವಿದ್ಯಾರ್ಥಿನಿ ರೂಂ ಮೇಟ್ ಗಳಲ್ಲಿ ನಡೆದ ವಿಚಾರವನ್ನು ತಿಳಿಸಿ ದ್ದಳು. ಆದರೆ ಹೆದರಿದ್ದ ವಿದ್ಯಾರ್ಥಿನಿ ಪ್ರಕರಣ   ದಾಖಲಿಸಲು ಮುಂದಾಗದೇ  ಕಾಲೇಜಿನ ಪ್ರಾಂಶುಪಾಲರಲ್ಲಿ ತಡವಾಗಿ ವಿಚಾರ ತಿಳಿಸಿದ್ದಳು. ಪ್ರಾಂಶುಪಾಲರ ಸಮ್ಮುಖದಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಲಾಯಿತು. ಸೆಕ್ಷನ್ 354 ಮತ್ತು 307 ಆಧಾರದಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆಬೆದರಿಕೆ  ಪ್ರಕರಣ ದಾಖಲಿಸಿಕೊಂಡ   ಪೊಲೀಸರು ಆರೋಪಿಯನ್ನು ಸೈಬರ್‍ನಿಂದ ಸಂಜೆ ವೇಳೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *