ವಿಟ್ಲ :ವ್ಯವಸಾಯ ಸೇವಾ ಸಹಕಾರ ಸಂಘ ದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅ.31ರಂದು ನಿವೃತ್ತಿ  ಹೊಂದಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಶಶಿಕಲಾ ಕೆ ಪಿ ಇವರಿಗೆ ಬೀಳ್ಕೊಡುವ ಸಮಾರಂಭವನ್ನು ಸಂಘದ ನೂತನ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಯನ್ , ಉಪಾಧ್ಯಕ್ಷ ರಾದ ಮಹಾಬಲೇಶ್ವರ ಭಟ್ ಎ, ನೂತನ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಭುವನೇಶ್ವರ ಬಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಕಾರಿ ಸಂಘಗಳ ಮೇಲ್ವಿಚಾರಕರಾದ ಯೋಗೀಶ್ ಎಚ್ ಹಾಗೂ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾದ ಎಚ್ ಜಗನ್ನಾಥ ಸಾಲ್ಯಾನ್ ಉಪಸ್ಥಿತರಿದ್ದರು

ಸಿಬ್ಬಂದಿ  ಶ್ರೀಧರ್ ಕೆ ಪ್ರಾರ್ಥನೆ ನಡೆಸಿಕೊಟ್ಟರು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ನಿರ್ದೇಶಕರಾದ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು

ಶೀಮತಿ ಶಶಿಕಲಾ ಕೆ ಪಿ ಇವರು 1986 ರಿಂದ ಸುಮಾರು 36 ವರ್ಷಗಳ ಸುದೀರ್ಘ ಸೇವೆಯಲ್ಲಿ 10 ವರ್ಷ ಗಳಿಂದ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಯಾಗಿ ಸೇವೆ ಸಲ್ಲಿಸಿರುತ್ತಾರೆ.

ಸಂಘದ ಸದಸ್ಯರು ಇವರು ಸಂಘವನ್ನು ಜನಸ್ನೇಹಿ ಸಂಘವಾಗಿ ಮುನ್ನಡೆಸಿ, ಗ್ರಾಹಕರಿಗೆ ನೀಡುತ್ತಿದ್ದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಕೆಯನ್ನು ನೀಡಿದರು. ವೇದಿಕೆಯಲ್ಲಿದ್ದ ಅಥಿತಿಗಳು ಈ ಸಂಘವನ್ನು ಜನಸ್ನೇಹಿ ಸಂಘವಾಗಿ ನಡೆಸಿದ ಇವರ ಸಾಧನೆ ಯನ್ನು ಕೊಂಡಾಡಿದರು

ನೂತನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಇವರ ಸೇವೆಯನ್ನು ಅಭಿನಂದಿಸಿ ಶುಭಹಾರೈಸಿದರು

ಅಧ್ಯಕ್ಷರು ಇವರ ಲೋಪರಹಿತ ನಿಶ್ವಾರ್ಥ ಸೇವೆಯನ್ನು. ಗ್ರಾಹಕರಿಗೆ ಮನ ಸಂತೃಪ್ತಿದಾಯಕ ವಾಗಿ ನೀಡುತ್ತಿದ್ದ ಸಲಹೆ ಹಾಗೂ ಸೇವೆಯನ್ನು ಶ್ಲಾಘಿಸಿದರು.ಅವರ ತಾಳ್ಮೆ ಮತ್ತು ಸಹನೆಯನ್ನು ಎಲ್ಲರೊಂದಿಗೆ ಉತ್ತಮ ಬಾಂಧವ್ಯದಿಂದ ವ್ಯವಹರಿಸುವ ಆತ್ಮೀಯತೆಯನ್ನು ವಿವರಿಸಿ ಅವರ ಮುಂದಿನ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಕಾರ್ಯಕ್ರಮ ದಲ್ಲಿ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರು ಶ್ರೀಮತಿ ಶಶಿಕಲಾ ಕೆ ಪಿ ಹಾಗೂ ಇವರ ಪತಿ ಶ್ರೀ ಪ್ರಭಾಕರ ಶೆಟ್ಟಿ ಇವರನ್ನು ಸನ್ಮಾನಿಸಿ ಬೀಳ್ಕೊಟ್ಟರು

ಉಪಾಧ್ಯಕ್ಷರಾದ ಮಹಾಬಲೇಶ್ವರ ಭಟ್ ವಂದಿಸಿದರು. ಮೋಹನ್ ದಾಸ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *