ಕೈಕಂಬ: ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಉಳಾಯಿಬೆಟ್ಟು ಗ್ರಾಮ ಪಂಚಾಯತ್, ವಾಮಂಜೂರಿನ ಸೈಂಟ್ ರೇಮಂಡ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ಹಾಗೂ ಉಳಾಯಿಬೆಟ್ಟಿನ ಶ್ರೀ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛ ಭಾರತ್ ೨.೦ ಅಭಿಯಾನದಂಗವಾಗಿ ಬುಧವಾರ ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದಿಂದ ಉಳಾಯಿಬೆಟ್ಟು ಪಂಚಾಯತ್ವರೆಗೆ ಸ್ವಚ್ಛತಾ ಕಾಲ್ನಡಿಗೆ ಜಾಥಾ ನಡೆಯಿತು.

ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಸದಸ್ಯ ವಿಶ್ವನಾಥ ಶೆಟ್ಟಿ, ಕ್ಲಬ್ನ ಅಧ್ಯಕ್ಷ ಶ್ರೀಧರ್ ತಲ್ಲಿಮಾರ್, ಕಮಲಾಕ್ಷ ತಲ್ಲಿಮಾರ್, ಸೈಂಟ್ ರೇಮಂಡ್ ಕಾಲೇಜಿನ ಎನ್ನೆಸ್ಸೆಸ್ ಸಂಯೋಜಕ ಡಾ. ಸುಜನಾ, ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಲೋಕೇಶ್ ಸಾಲ್ಯಾನ್, ಮುಕೇಶ್ ಕಾಂತಾರಬೆಟ್ಟು, ರಮಾನಾಥ ಕಿನ್ನಿಬೆಟ್ಟು, ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಗ್ರಾಮಸ್ಥರು, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
