ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿಯಂದು ಹಿಂದೂ ಧಾರ್ಮಿಕದತ್ತಿ ಇಲಾಖೆಗೊಳಪಟ್ಟ ದೇಗುಲಗಳಲ್ಲಿ ಸಾಮೂಹಿಕ ಗೋಪೂಜೆಗೆ ರಾಜ್ಯ ಸರಕಾರದ ಆದೇಶದಂತೆ ಗೋಪೂಜೆ ನೆರವೇರಿತು. ಪೊಳಲಿ ದೇವಳದ ಅರ್ಚಕ ಕೆ. ರಾಮ್ ಭಟ್ ಗೋ ಪೂಜೆ ನೆರವೇರಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ.ಸಚಿವ ರಮಾನಾಥ ರೈ, ಮಾ.ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ಗ್ರಾಂ.ಪಂ.ಅದ್ಯಕ್ಷ ಚಂದ್ರಾಹಾಸ ಪಲ್ಲಿಪಾಡಿ .ನಂದರಾಮ ರೈ ,ಲಕ್ಷ್ಮೀಶ್ ಶೆಟ್ಟಿ ಹಾಗೂ ದೇವಳದ ಸಿಬ್ಬಂದಿಗಳು
ಮತ್ತಿತರರು ಇದ್ದರು.

