ಕೊಲ್ಯ: ಕರ್ಕಶ ಹಾರ್ನ್ ಹಾಕಿ ಕಾಡುತ್ತಿದ್ದ ಜನಪ್ರತಿನಿಧಿ, ಪ್ರಶ್ನಿಸಿದ ಮಹಿಳೆ, ಕೆರಳಿದ ಬಿಜೆಪಿ ಮುಖಂಡ, ಪೊಲೀಸ್ ಕಾನ್ ಸ್ಟೇಬಲ್ ಜೊತೆ ಸೇರಿ ದಂಪತಿಗೆ ಹಲ್ಲೆ, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು.

ಮನೆ ಸಮೀಪ ಸ್ಕೂಟರ್ ನ ಹಾರ್ನ್ ಮೂಲಕ ಕರ್ಕಶ ಶಬ್ಧ ಮಾಡುತ್ತಾ ಕೆಣಕಿದ ಜನಪ್ರತಿನಿಧಿಯೊಬ್ಬರನ್ನು ಪ್ರಶ್ನಿಸಿದ ಮಹಿಳೆ ಮತ್ತು ಕುಟುಂಬಸ್ಥರಿಗೆ ಆತ ಪೊಲೀಸ್ ಕಾನ್ ಸ್ಟೇಬಲ್ ಜೊತೆ ಸೇರಿ ಹಲ್ಲೆ ನಡೆಸಿದ ಘಟನೆ ಕೊಲ್ಯ ಕಣೀರು ತೋಟದಲ್ಲಿ ನಡೆದಿದ್ದು, ಗಾಯಾಳು ಮಹಿಳೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲ್ಯ ಕಣೀರುತೋಟ ನಿವಾಸಿ ವಿಜಯಲಕ್ಷ್ಮಿ(43) ಗಾಯಾಳು ಮಹಿಳೆ.

ಭಾನುವಾರ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ‌ ಹಾಕುತ್ತಿದ್ದಾಗ ಮನೆಯಂಗಳದ ಹೊರಗೆ ಸ್ಕೂಟರ್ ನಲ್ಲಿದ್ದ ಸ್ಥಳೀಯ ಬಿಜೆಪಿ ಮುಖಂಡ ಶೇಖರ್ ಕನೀರುತೋಟ ಕರ್ಕಶವಾಗಿ ಹಾರ್ನ್ ಹೊಡೆಯುತ್ತಿರುವುದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಶೇಖರ್ ಮತ್ತು ರಸ್ತೆ ಬದಿಯಲ್ಲಿದ್ದ ನಿಂತಿದ್ದ ಶೇಖರ್ ಆಪ್ತ ಸ್ಥಳೀಯ ನಿವಾಸಿ ಪಾಂಡೇಶ್ವರ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ನೂತನ್ ಕೊಲ್ಯ ಜೊತೆ ಸೇರಿ ವಿಜಯಲಕ್ಷ್ಮಿ ಅವರ ಮನೆಯ ಗೇಟ್ ತುಳಿದು ಅಕ್ರಮವಾಗಿ ಮನೆ ಅಂಗಳಕ್ಕೆ ಪ್ರವೇಶಿಸಿ ವಿಜಯಲಕ್ಷ್ಮಿಯವರ ಕೈ ಎಳೆದು ಭುಜಕ್ಕೆ ಕಚ್ಚಿ ಗಾಯಗೊಳಿಸಿದ್ದಾರೆ‌.

ಆಗ ಮನೆಯೊಳಗಿದ್ದ ವಿಜಯಲಕ್ಷ್ಮಿ ಅವರ ಪತಿ ತೇಜ್ ಪಾಲ್, ಮಕ್ಕಳಾದ ಹಿತೇಶ್ ಮತ್ತು ಹರ್ಷ ಅವರು‌ ಗಲಾಟೆಯನ್ನ ತಡೆಯಲು ಬಂದಿದ್ದಾರೆ. ಶೇಖರ್ ವಿಜಯಲಕ್ಷ್ಮಿ ಅವರಿಗೆ ಕಲ್ಲಿಂದ ಹಲ್ಲೆ ನಡೆಸಿದ್ದು ತಡೆಯಲು ಬಂದ ತೇಜ್ ಪಾಲ್, ಹಿತೇಶ್, ಹರ್ಷ ಅವರಿಗೂ ಗಾಯಗಳಾಗಿವೆ.

ಘಟನೆಯಿಂದ ಗಾಯಗೊಂಡಿರುವ ವಿಜಯಲಕ್ಷ್ಮಿ ಅವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು,ಪತಿ,ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಗಲಾಟೆಗೆ ಮೂಲ ಕಾರಣಕರ್ತ ಎಂದು ಸ್ಥಳೀಯ ಬಿಜೆಪಿ ಮುಖಂಡ ಶೇಖರ್ ಅವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ ಅವರ ಮನೆಯ ಮುಂದುಗಡೆ ತನ್ನ ಅತ್ತಿಗೆಗಾಗಿ ನಿರ್ಮಿಸುತ್ತಿದ್ದ ಮನೆ ಕಾನೂನುಬಾಹಿರ ಎಂದು ವಿಜಯಲಕ್ಷ್ಮಿ ಮನೆ ಕಾಮಗಾರಿಯನ್ನ‌ ಕಾನೂನು ರೀತಿ ಹೋರಾಟ ನಡೆಸಿ ತಡೆದಿದ್ದರು.

ಭಾನುವಾರ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರ ಮೇಲೆ ನಡೆದ ಹಲ್ಲೆಯಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ನೂತನ್ ಕೊಲ್ಯ ಆರೋಪಿಯಾಗಿದ್ದು ಆತ ಈ ಹಿಂದೆ ಮಂಗಳೂರು ಸಿಸಿಬಿಯಲ್ಲಿದ್ದು ಕರ್ತವ್ಯದಲ್ಲಿರುವಾಗಲೇ ಶಿಕ್ಷಾರ್ಹ ಕ್ರಮದಡಿ ಪಾಂಡೇಶ್ವರ ಠಾಣೆಗೆ ವರ್ಗಾವಣೆಗೊಂಡಿದ್ದರು.
ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರ ಮೇಲೆ ನಡೆದ ಹಲ್ಲೆ ಪ್ರಕರಣದಡಿ ಬಿಜೆಪಿ ಮುಖಂಡ ಶೇಖರ್, ಪೊಲೀಸ್ ಪೇದೆ ನೂತನ್ ಸೇರಿದಂತೆ ಐದು ಮಂದಿಯ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಈ ಬಗ್ಗೆ ಪಕ್ಷದ ಮುಖಂಡರಿಂದಲೂ ಪುಡಿ ನಾಯಕರ ವರ್ತನೆ ಬಗ್ಗೆ ಬೇಸರ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *