ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಹಾಗೂ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ ಇವರ ನೇತೃತ್ವದಲ್ಲಿ ಪೆರ್ನೆ ಮುಗೇರು ಸಮುದಾಯ ಭವನ ಕರೋಪಾಡಿ ಇಲ್ಲಿ ದಲಿತ್ ಸೇವಾ ಸಮಿತಿಯ ನೂತನ ಕರೋಪಾಡಿ ಗ್ರಾಮ ಶಾಖೆಯ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ಮಾಧವ ನಾಯ್ಕ, ಅಧ್ಯಕ್ಷ ನಾರಾಯಣ ನಾಯ್ಕ ಪೆರ್ನೆ ಮುಗೇರು, ಸಂಚಾಲಕರಾಗಿ ಹರೀಶ್ ಮತ್ತು ಆನಂದ ಪೆರ್ನೆ ಮುಗೇರು, ಉಪಾಧ್ಯಕ್ಷ ಮಹಾಬಲ ನಾಯ್ಕ, ಕಾರ್ಯದರ್ಶಿ ರಘುನಾಥ್, ಜತೆಕಾರ್ಯದರ್ಶಿ ಚಿತ್ರಾ, ಕೋಶಾಧಿಕಾರಿ ಶಾರದ ಇವರನ್ನು ಆಯ್ಕೆ ಮಾಡಲಾಯಿತು. ಬಿ ಕೆ ಸೇಸಪ್ಪ ಬೆದ್ರಕಾಡು ಸಮಿತಿ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಉಳ್ಳಾಲ ಶಾಖೆಯ ಅಧ್ಯಕ್ಷ ನಾಗೇಶ್ ಮುಡಿಪು, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮತ್ತು ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *