ಸುರತ್ಕಲ್: ಟೋಲ್‍ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ಸೆ.13ರಂದು ಎನ್‍ಐಟಿಕೆ ಸಮೀಪ ಇರುವ ಸುರತ್ಕಲ್ ಟೋಲ್ ಗೇಟ್ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ದ.ಕ. ಹಾಗೂ ಉಡುಪಿ ಜಿಲ್ಲಾ ಸಮಿತಿಗಳು, ವಿಮಾನ ನಿಲ್ದಾಣ ಟ್ಯಾಕ್ಸಿ ಯೂನಿಯನ್, ದಲಿತ ಸಂಘರ್ಷ ದ.ಕ, ಉಡುಪಿ ಜಿಲ್ಲಾ ಸಮಿತಿಗಳು, ಡಿವೈಎಫ್‍ಐ, ಜಯಕರ್ನಾಟಕ, ಜನವಾದಿ ಮಹಿಳಾ ಸಂಘಟನೆ, ನಾಗರಿಕ ಸಮಿತಿ ಸುರತ್ಕಲ್, ಕುಳಾಯಿ ನಾಗರಿಕ ಹೋರಾಟ ಸಮಿತಿ ಸುರತ್ಕಲ್, ನಾಗರಿಕ ಸಮಿತಿ ಹೆಜಮಾಡಿ, ಉಭಯ ಜಿಲ್ಲೆಗಳ ಬಸ್ ಮಾಲಕರ ಸಂಘಟನೆಗಳು, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ, ಸಿಐಟಿಯು ಉಡುಪಿ, ದ.ಕ. ಜಿಲ್ಲಾ ಸಮಿತಿಗಳು, ಕಟ್ಟಡ ಕಾರ್ಮಿಕರ ಸಂಘಟನೆ, ಸಾಮರಸ್ಯ ಮಂಗಳೂರು, ಮುಲ್ಕಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಪಡುಬಿದ್ರೆ, ಸಿಪಿಐಎಂ ದ.ಕ. ಉಡುಪಿ ಜಿಲ್ಲಾ ಸಮಿತಿಗಳು, ಜಾತ್ಯಾತೀತ ಜನತಾ ದಳ ಯುವ ಘಟಕ, ಸಿಪಿಐ, ಎಐಟಿಯುಸಿ ಮತ್ತಿತರ ಹಲವು ಸ್ಥಳೀಯ ಸಂಘ ಸಂಸ್ಥೆಗಳು ಸಾಮೂಹಿಕ ಧರಣಿಯಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *