ಸುರತ್ಕಲ್: ಅಗರಿ ಶ್ರೀನಿವಾಸ ಭಾಗವತರು ಆರಂಭಿಸಿದ್ದ ಶೈಲಿ ಭಾಗವತಿಕೆಯನ್ನು ಅಗರಿ ರಘುರಾಮ ರಾವ್ ಮುಂದುವರಿಸಿ ಪ್ರಸಿದ್ಧಿಯತ್ತ ಕೊಂಡೊಯ್ದಿದ್ದರು. ಅಗರಿ ರಾಘವೇಂದ್ರ ರಾವ್ ಅವರು ಯಕ್ಷಗಾನ ಪ್ರೋತ್ಸಾಹಕರಾಗಿ, ಯಕ್ಷಗಾನಕ್ಕೆ ಮತ್ತು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಕಟೀಲು ದೇವಳದ ವೇದಮೂರ್ತಿ ಅಸ್ರಣ್ಣ ಹೇಳಿದರು.

ಸುರತ್ಕಲ್ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ಶನಿವಾರ ವಿದ್ಯಾದಾಯಿನಿ ವಜ್ರ, ಮಹೋತ್ಸವ ಸಭಾಂಗಣದಲ್ಲಿ ನಡೆದ ಯಕ್ಷಗಾನ ಪೋಷಕ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಟಿವಿಎಸ್ ಮೊಪೇಡ್ ನಲ್ಲಿ ಗರಿಷ್ಠ ದೂರ ಎತ್ತರ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಗಿರೀಶ್ ಪಿವಿ ಅವರಿಗೆ ಆಯೋಜಿಸಲಾಗಿದ್ದ ಸಾರ್ವಜನಿಕ ಅಭಿನಂದನೆ ಸಂದರ್ಭ ನಡೆದ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಟೀಲು ದೇವಳದ ವೇದಮೂರ್ತಿ ವಾಸುದೇವ ಅಸ್ರಣ್ಣ ಆಶೀರ್ವಚನ ನೀಡಿದರು. ಸಾರ್ವಜನಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಎಂ ವೆಂಕಟ್ರಾವ್, ಅಧ್ಯಕ್ಷ ಪ್ರಕಾಶ್ ಎಂ, ಕಾರ್ಯದರ್ಶಿ ಕಲಾವತಿ ಕೆ. ಕೋಶಾಧಿಕಾರಿ ರಾಘವೇಂದ್ರ ಎಚ್.ವಿ ಹಾಗೂ ಅಗರಿ ರಾಘವೇಂದ್ರ ರಾವ್, ಗಿರೀಶ್ ಪಿ.ವಿ ಉಪಸ್ಥಿತರಿದ್ದರು.

ವಿದ್ಯಾದಾಯನಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಎಚ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಯೋಗಿಲ್ ಹಾಲ್ ಕುಳಾಯಿ ನಿರೂಪಿಸಿದರು. ಉಪಾಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ವಂದಿಸಿದರು.

ಪ್ರಸಿದ್ಧ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಹಾಗೂ ಹಿಮ್ಮೇಳ ಕಲಾವಿದರಾಗಿ ಕೃಷ್ಣಪ್ರಸಾದ್ ಉಳಿತ್ತಾಯ, ಇದರಲ್ಲಿ ದೇಲಂತಬೆಟ್ಟು ಸುಬ್ರಹ್ಮಣ್ಯ ಭಟ್ ರಾಜೇಂದ್ರ ಕೃಷ್ಣ ಭಾಗವಹಿಸಿದ್ದು, ವಿನಯ ಆಚಾರ್ ಹೊಸಬೆಟ್ಟು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *