ಬಂಟ್ವಾಳ: ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿ ಊರಿನವರು ಮುತುವರ್ಜಿ ವಹಿಸಿದಾಗ ಯಾವುದೇ ಕಾಮಗಾರಿಗಳು ಸೂಕ್ತ ರೀತಿಯಲ್ಲಿ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಶಾಲೆಗಳಲ್ಲೇ ಅಂಗನವಾಡಿ ಕೇಂದ್ರಗಳ ನಡೆಸುವ ಕುರಿತು ಚರ್ಚೆಗಳು ನಡೆದಿದ್ದು, ಈಗಿನ ಅಗತ್ಯಕ್ಕೆ ತಕ್ಕಂತೆ ಕಟ್ಟಡಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ಸಜೀಪಮೂಡ ಗ್ರಾಮದ ಕೊಲ್ಯ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿದರು.WhatsApp Image 2022-06-14 at 12.19.05 PM (1)  WhatsApp Image 2022-06-14 at 12.19.05 PM

೧ ಲಕ್ಷ ಕೋ.ರೂ. ನರೇಗಾ ಮೂಲಕ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿಗೆ ಬಳಕೆ ಮಾಡಿದ್ದು, ಇದರಿಂದ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೂ ಬಳಕೆ ಮಾಡಲಾಗುತ್ತದೆ. ಪೋಷಕರು ಕೂಡ ಅಂಗನವಾಡಿ ಕೇಂದ್ರಗಳ ಕುರಿತು ವಿಶೇಷ ಅಂಗನವಾಡಿ ಕೇಂದ್ರಕ್ಕೆ ರಸ್ತೆ ಕಾಂಕ್ರೀಟ್ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ನೀಡಲಾಯಿತು. ಸಮಾರಂಭದಲ್ಲಿ ಗುತ್ತಿಗೆದಾರರ ಶೈಲೇಶ್, ಅಧ್ಯಕ್ಷ ಶೇಖರ್, ಗೌರವಾಧ್ಯಕ್ಷ ಮುತ್ತಪ್ಪ‌ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ವಿಲ್ಮಾ ಅವರನ್ನು ಸಮ್ಮಾನಿಸಲಾಯಿತು.WhatsApp Image 2022-06-14 at 12.19.04 PM WhatsApp Image 2022-06-14 at 12.19.04 PM (1)

ಸಜೀಪಮೂಡ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು, ಯೋಗೀಶ್ ಬೆಳ್ಚಡ, ಸೋಮನಾಥ ಬಿ.ಎಂ, ಅರುಂದತಿ, ವಿಜಯ, ಹಝೀಜ್ ಬೊಳ್ಳಾಯಿ, ಹೇಮಾವತಿ, ಫೌಝೀಯಾ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ಸಂರಕ್ಷಣಾಧಿಕಾರಿ ಭಾರತಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕವಿತಾ, ಯುವಕ ಮಂಡಲದವರು, ಮಹಿಳಾ ಮಂಡಲದವರು ಉಪಸ್ಥಿತರಿದ್ದರು.WhatsApp Image 2022-06-14 at 12.19.03 PM

By Suddi9

Leave a Reply

Your email address will not be published. Required fields are marked *