ವಿಟ್ಲ: ಸರಕಾರಿ ಪ್ರೌಢಶಾಲೆ(RMSA)ವಿಟ್ಲ ಹಾಗೂ ದ.ಕ.ಜಿ.ಪಂ.ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮವು ಮೇ.28ರಂದು ಶನಿವಾರದಂದು ನಡೆಯಿತು.
ವಿಟ್ಲ ಪಟ್ಟಣಪಂಚಾಯತ್ ಕೌನ್ಸಿಲರ್ ರವಿಪ್ರಕಾಶ್ ಇವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ್ ಆಳ್ವ ಹಾಗೂ ಸದಸ್ಯರು,ಸಮೂಹ ಪಂಪನ್ಮೂಲ ವ್ಯಕ್ತಿ ಬಿಂದು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಯರಾದ ಅನ್ನಪೂರ್ಣ ,ಪ್ರೇಮಲತಾ ಪಿ ಹಾಗೂ ಎಲ್ಲಾ ಶಿಕ್ಷಕರು ಸಹಕರಿಸಿದರು.
