ಬಂಟ್ವಾಳ : ಬಂಟ್ವಾಳದ ನೂತನ ತಹಸೀಲ್ದಾರ್ ಆಗಿ ಡಾ. ಸ್ಮಿತಾ ರಾಮು ಅವರು ಮೇ.13ರಂದು ಶುಕ್ರವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರು. ಬಂಟ್ವಾಳದಲ್ಲಿ ಈವರೆಗೆ ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರಶ್ಮಿ ಎಸ್.ಆರ್. ಅವರು ಮಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ಇದೀಗ ಅವರ ಬದಲಿಗೆ ಡಾ. ಸ್ಮಿತಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೆಎಎಸ್ ಅಧಿಕಾರಿಯಾಗಿ ಕಳೆದ ಏಳು ವರ್ಷಗಳಿಂದ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

WhatsApp Image 2022-05-14 at 2.22.21 PM

ಇದುವರೆಗೆ ಅವರು ಮಂಡ್ಯದಲ್ಲಿ ಚುನಾವಣಾ ಶಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು ಮೇ.13ರಂದು ಅಧಿಕಾರ ಸ್ವೀಕರಿಸಿದ ನೂತನ ತಹಸೀಲ್ದಾರ್‌ ಅವರನ್ನು ಕಚೇರಿ ಸಿಬ್ಬಂದಿ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು ಉಪತಹಸೀಲ್ದಾರ್‌ ರಾಜೇಶ್ ನಾಯ್ಕ, ನವೀನ್ ಬೆಂಜನಪದವು ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್ ಬಂಟ್ವಾಳ ತಾಲೂಕು ಗ್ರಾಮ ಲೆಕ್ಕಾಧಿಕಾರಿ ಗಳ ಸಂಘದ ಅಧ್ಯಕ್ಷರಾದ ಅನಿಲ್. ಕೆ.ಪೂಜಾರಿ, ಹಾಗೂ ಪದಾಧಿಕಾರಿಗಳು, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ರಾದ ಮೋಹನ್ ದಾಸ್ ಕಲ್ಲಡ್ಕ ಇನ್ನಿತರರು ಸ್ವಾಗತಿಸಿದರು.
WhatsApp Image 2022-05-14 at 2.22.22 PM

By Suddi9

Leave a Reply

Your email address will not be published. Required fields are marked *