ಬಂಟ್ವಾಳ: ತಾಲ್ಲೂಕಿನ ಅರಳದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತಿತರರು ಬುಧವಾರ ಭೇಟಿ ನೀಡಿದರು. ಡಿ.ಸುರೇಂದ್ರ ಕುಮಾರ್, ಎ.ರಾಜೇಂದ್ರ ಶೆಟ್ಟಿ ಮತ್ತಿತರರು ಇದ್ದರು.27btl-Arala

ಇಲ್ಲಿನ ಪ್ರಸಿದ್ಧ ಅರಳ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಮೇ.೪ರಿಂದ ೮ರತನಕ ಪಂಚಕಲ್ಯಾಣ ನಡೆಯಲಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ರಾಷ್ಟ್ರೀಯ ಜೈನ್ ಮಿಲನ್ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್ ಬುಧವಾರ ಭೇಟಿ ನೀಡಿದರು.

ಅರ್ಕುಳಬೀಡು ವಜ್ರನಾಭ ಶೆಟ್ಟಿ, ಜೈನ್ ಮಿಲನ್ ಜಿಲ್ಲಾ ಮುಖಂಡ ಸುದರ್ಶನ್ ಜೈನ್, ಪ್ರಮುಖರಾದ ಅಜಿತ್ ಕುಪ್ಪೆಪದವು, ವೃಷಭರಾಜ ಇಂದ್ರ ವಾಮದಪದವು, ನಿರಂಜನ ಹೆಗ್ಡೆ ಅಂತರಗುತ್ತು, ಹರ್ಷೇಂದ್ರ ಹೆಗ್ಡೆ, ರಂಜನ್ ಕುಮಾರ್ ಶೆಟ್ಟಿ, ಜಗಧೀಶ ಆಳ್ವ ಅಗ್ಗೊಂಡೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *